ಎರವಲು ಪದಗಳು ಕನ್ನಡದ ಸ್ವಭಾವವನ್ನೂ ಸ್ವರೂಪವನ್ನೂ ಹೇಗೆ ಪಡೆಯುತ್ತವೆ ಎಂಬುದನ್ನು ತಿಳಿದಾಗ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ಜನರು ತಮ್ಮ ಧ್ವನ್ಯಂಗಗಳಿಗೆ ಹೊಂದಿಕೊಳ್ಳುವಂತೆ ಹೊಸ ಶಬ್ದಗಳನ್ನು ಉಚ್ಚರಿಸಿ, ಅವುಗಳಿಗೆ ಸ್ವರೂಪವನ್ನೂ ಉಚ್ಚಾರಣೆಯನ್ನೂ ನಿರ್ಧರಿಸುತ್ತಾರೆ. ಅವು ಹಾಗೇ ನಿಂತುಬಿಡುತ್ತವೆ. ಹೀಗೆ ಮಾಡುವವರು ಭಾಷಾಶಾಸ್ತ್ರಜ್ಝರಾಗಲೀ, ವಿದ್ವಾಂಸರಾಗಲೀ ಇಲ್ಲ. ಹೀಗೆ ಹಲವು ಭಾಷೆಗಳಿಂದ ಬಂದ ಎರವಲು ಪದಗಳ ಮೂಲವನ್ನು ಶೋಧಿಸಲು ಮಾಡಿದ ಪ್ರಯತ್ನವೇ ಈ ಎರವಲು ಪದಕೋಶ.