Product Description
ಹಲವು ವೈವಿಧ್ಯಗಳ ಅರಣ್ಯಗಳನ್ನೂ ವನ್ಯಜೀವಿಗಳನ್ನೂ ಪಡೆದ ಕರ್ನಾಟಕದಲ್ಲಿ ಇರುವ ನಮಗಂತೂ ಈ ಪುಸ್ತಕ ಬಹಳ ಅಗತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ. ಸದ್ಯದಲ್ಲೇ ಕುದುರೆಮುಖದ ಪ್ರಶ್ನೆ ನಮ್ಮ ಎದುರಿಗಿದೆ. ಗಣಿಗಾರಿಕೆಯನ್ನು ಹೇಗೋ ಮುಂದುವರಿಸಿ ಕಾಡನ್ನೂ ನದಿಯನ್ನೂ ನಾಶ ಮಾಡುವ ಲೋಭಿಗಳು ಒಂದು ಕಡೆ, ಓಟಿನ ಬೇಟೆಯ ರಾಜಕಾರಣ ಒಂದು ಕಡೆ, ಸಾಮಾಜಿಕ ನ್ಯಾಯದ ನೆವದಲ್ಲಿ ಹಿಂಸಾತ್ಮಕವಾಗಿ ಅಧಿಕಾರವನ್ನು ಗ್ರಹಿಸಬೇಕೆಂಬ ನಕ್ಸಲೀಯ ಹೊಂಚು ಒಂದು ಕಡೆ, ಅಲ್ಲೇ ಇರುವುದೋ ಹೊರ ಬರುವುದೋ ತಿಳಿಯದೇ ದಿನದೂಡುತ್ತಿರುವ, ನಕ್ಸಲರಿಂದಲೂ ಕಾಡುಗಳ್ಳರಿಂದಲೂ ಮಾರ್ಕೆಟಿನ ದುರಾಸೆಯಿಂದಲೂ ವಂಚಿತರಾಗುತ್ತಿರುವ ಅಮಾಯಕ ಆದಿವಾಸಿಗಳು ಒಂದು ಕಡೆ, ಹೀಗೆ ಆವೃತವಾದ ಸನ್ನಿವೇಶದಲ್ಲಿ ನಾವು ಮುಂದಿನ ಕ್ರಮಗಳನ್ನು ಚಿಂತಿಸಬೇಕಾಗಿದೆ. ವಿಮರ್ಶೆ:ವನ್ಯಜೀವಿಗಳ ರಮ್ಯಲೋಕ
ಇಪ್ಪತ್ತೇಳು ಪರಿಣತರು ವನ್ಯಜೀವಿಗಳ ರಕ್ಷಣೆ ಬಗ್ಗೆ ಬಾನುಲಿ ಮೂಲಕ ನಡೆಸಿದ ಸಂವಾದದ ಫಲವೇ ಈ ಪುಸ್ತಕ. ವನ್ಯಜೀವಿಗಳ ರಕ್ಷಣೆ ಮುಖ್ಯವಾದುದು. ವನ್ಯಜೀವಿಗಳ ಕ್ಷೇತ್ರವನ್ನು ಮಾನವ ಕಬಳಿಸುವುದರಿಂದ ಮನುಕುಲದ ಪರಿಸರದ ನಾಶಕ್ಕೆ ದಾರಿಯಾದೀತು ಎಂಬ ಕಳಕಳಿ ವ್ಯಕ್ತವಾಗಿದೆ.