Select Size
Quantity
Product Description
A Collection of essays.
ಸಾಹಿತ್ಯ ಲೋಕದ ಮತ್ತೊಂದು ಮಾಲ್ಗುಡಿ ಡೇಸ್
ಎಂ.ಆರ್. ಕಮಲ ಮೇಡಮ್ ರವರ ಕಾಳನಾಮ ಚರಿತೆ ಪುಸ್ತಕ ಇನ್ನೊಂದು ರೀತಿಯ ಮಾಲ್ಗುಡಿ ಡೇಸ್ ನಂತೆ. ಈ ಪುಸ್ತಕ, ಕಾಳನ ಮಟ್ಟಿಗೆ ಮೂರು ರಸ್ತೆಯ ಭೌತಿಕ ಲೋಕ : ಕಾಳನ ತಾಯಿ, "ಕಮಲ" ರವರ ಮಟ್ಟಿಗೆ ಕಾಳಜಿ, ಕೋಪ, ಆತ್ಮೀಯತೆ, ಸಂತೋಷ-ದುಃಖ, ನಗು-ಆಳು, ಅಸಹಾಯಕತೆ ಹೀಗೆ ನೂರಾರು ಭಾವಗಳ ಅಭೌತಿಕ ಲೋಕ. ಕಮಲ ರವರು ಕಾಳನ ಮೂಲಕ ಪ್ರಪಂಚದ ಜನರನ್ನು ನೋಡುತ್ತಾರೆ. ಕಾಳ ಅವರಿಗೆ ಯಕಶ್ಚಿತ್ "ನಾಯಿ" ಅಲ್ಲ. ಬದುಕಿನ ಒಂದು ಭಾಗ. ಮನುಷ್ಯರ ನಿಜ ರೂಪವನ್ನು ಅನಾವರಣ ಮಾಡುವ ಆತ್ಮ. ಕಾಳನನ್ನು ಇಷ್ಟ ಪಡುವವರಲ್ಲಿ ಅವರು ದೈವತ್ವ ನೋಡುತ್ತಾರೆ. ಕಾಳ ಯಾರಿಗೆ ಇಷ್ಟವಾಗುವುದಿಲ್ಲವೋ ಅವರು ಖಂಡಿತವಾಗಿಯೂ, ಕಮಲರವರ ಭಾವ ಪ್ರಪಂಚದ ಭಾಗವಾಗುವ ಸ್ನೇಹಿತರಾಗರು. ಈ ರೀತಿ ಅವರೇನು ಹೇಳಿಲ್ಲ. ಆದರೆ, ಅದು ಅವರ ತುಟಿಗಳಿಂದ ಹೊರಭಾರದಿರುವ ಸತ್ಯ.
ಕಾಳನಾಮಚರಿತೆ ಸ್ವತಃ ಅನುಭವದ ಚಿತ್ರಣ. ಈ ಹಗುರ ಹರಟೆಯಲ್ಲಿ, ಕನ್ನಡ ಅಧ್ಯಾಪಕರೂ ಆಗಿದ್ದ ಎಂ.ಆರ್.ಕಮಲ ಮೇಡಮ್ ರವರ ಹಳೆಗನ್ನಡ, ನಡುಗನ್ನಡ, ಬೀದಿಗನ್ನಡ, ಭಾವಗನ್ನಡ ಎಲ್ಲವೂ ಹದವಾಗಿ ಸೊಗಸಾಗಿ ಸಮ್ಮಿಲನಗೊಂಡಿದೆ. ಹೇಳುತ್ತಾ ಇದ್ದರೆ, ಹೇಳುತ್ತಲೇ ಇರಬಹುದು. ಆದರೆ ಓದಿನ ಸವಿಯನ್ನು ಓದಿಯೇ ಸವಿಯಬೇಕಲ್ಲವೇ?
ಕಾಳನಾಮಚರಿತೆಯ ಎರಡನೇ ಪ್ರಕಟಣೆ "ನಂಬುಗೆ" ಪ್ರಕಾಶನದ ಚೊಚ್ಚಲ ಪ್ರಯತ್ನ. ಓದೋಣ. ಬೆಳೆಯೋಣ. ಬೆಳೆಸೋಣ.
Weight
300 GMS
Length
22 CMS
Author
M R Kamala
Publisher
Nambuge Solutions
Publication Year
2024
Number of Pages
216
Binding
Soft Bound
Language
Kannada