Select Size
Quantity
Product Description
ಹೈದರಾಬಾದಿನ ಓಲ್ಡ್ ಸಿಟಿಯಲ್ಲಿರುವ ಅತ್ತರ್ ಮಾರುವ ಒಂದು ಅಂಗಡಿಯಲ್ಲಿ ಕುಳಿತಿದ್ದೆ. ವಿಚಿತ್ರವೆಂದರೆ ಯಾವ ಭಾಷೆ ಮಾತನಾಡುವವರಾದರೂ ಓಲ್ಡ್ ಸಿಟಿಯನ್ನು ‘ಓಲ್ಡ್ ಸಿಟಿ’ ಎಂದೇ ಕರೆಯುತ್ತಾರೆಯೇ ಹೊರತು, ಹಿಂದಿ ಮಾತನಾಡುವವರು ‘ಪುರಾಣಿ ಶೆಹರ್’ಎಂದೋ, ತೆಲುಗು ಮಾತನಾಡುವವರು ‘ಪಾತ ನಗರಮು’ ಎಂದೋ, ತಮಿಳು ಮಾತುನಾಡುವವರು ‘ಪಳೈಯ ನಗರಮ್’ ಎಂದೋ ಹೇಳುವುದಿಲ್ಲ. ಉರ್ದು ಮಾತನಾಡುವವರೂ, ಇಂಗ್ಲೀಷ್ ಬಾರದವರೂ ಸಹಾ ಓಲ್ಡ್ ಸಿಟಿ ಎಂದೇ ಕರೆಯುತ್ತಾರೆ. ಆಂಗ್ಲದ ಈ ಎರಡು ಪದಗಳು ಅಲ್ಲಿಯ ಚಾರ್ಮಿನಾರ್ ಅದರ ಸುತ್ತಲಿನ ಗಿಜಿಗಿಜಿಯಾದ ರಸ್ತೆಗಳು, ಸಣ್ಣ ಓಣಿಗಳು, ಹಲೀಮ್ ಮಾಡುವ ಪುಟ್ಪಾತಿನ ಹೋಟೆಲ್ಗಳು, ಶೇರ್ವಾನಿ, ಕುರ್ತಾಗಳಲ್ಲಿ ಕಣ್ಣಿಗೆ ಸುರ್ಮಾ ಹಚ್ಚಿಕೊಂಡು ಮೀಸೆಯಿಲ್ಲದೆ ಓಡಾಡುವ ಗಡ್ಡದಾರಿಗಳು, ಕಪ್ಪು ಬೂರ್ಕಾಗಳು, ಬಳೆ, ಮುತ್ತು ಮಾರುವ ಅಂಗಡಿಗಳು, ಕೈ ಗಾಡಿಯಲ್ಲಿ ರಾಶಿ ಹಾಕಿಕೊಂಡು ಮಾರುವ ರೊಟ್ಟಿ, ಬಿಸ್ಕತ್ತುಗಳು, ಚಾಯ್ ದುಖಾನುಗಳು, ಬಿರಿಯಾನಿ, ಶೇರ್ವಾ ವಾಸನೆಗಳು, ಮುಂತಹವನ್ನು ಕಣ್ಣಿಗೆ ಕಟ್ಟಿಕೊಡುವಷ್ಟು ಬೇರೆಯ ಭಾಷೆಯ ಪದಗಳಲ್ಲಿ ಕೇಳಿಸುವುದಿಲ್ಲ. ಇದು ನಿಜವೋ ಅಥವಾ ಭ್ರಮೆಯೋ ತಿಳಿಯದು. ಆದರೆ ಕೆಲವು ಭಾಷೆಗಳು ಅಷ್ಟು ಸಶಕ್ತವಾಗಿರುತ್ತವೆ.
Binding
Soft Bound
Author
K Nallathambi
ISBN-13
9788195489206
Publication Year
2022
Publisher
Panchami Media Publications
Number of Pages
96
Weight
100 GMS
Width
12 CMS
Height
1 CMS
Length
18 CMS
Language
Kannada