Select Size
Quantity
Product Description
ಏನೇ ಕೆಲಸ ಮಾಡೋರಾಗಲಿ ಒಬ್ಬೊಬ್ಬರಿಗೆ ಅವರದೇ ಆದ ಒಂದು ಶೈಲಿ ಇರುತ್ತೆ. ಬಹುಶಃ ರಂಜನಿ ಕೀರ್ತಿ ಅವರ ಶೈಲಿಯೆಂದರೆ; ಎಲ್ಲೆಲ್ಲೋ ಏರಿಳಿದು, ಏನೇನೋ ಭಾವಗಳ ಅಲೆಯ ಮೇಲೆ ತೇಲಾಡಿಸಿ ಬರುವ ಕಥೆಯ ಕೊನೆಯಲ್ಲೊಂದು ವಾಕ್ಯವಿರುತ್ತದೆ, ಬಹುತೇಕ ಅದು ಎರಡು ಮೂರು ಪದಗಳಷ್ಟೇ ಇರುವ ಪುಟ್ಟ ಸಾಲು, ಕೆಲವೊಮ್ಮೆ ಅದು ಸಾಲು ಕೂಡಾ ಅಲ್ಲಾ, ಕೇವಲ ಒಂದೇ ಪದ, ಆದರೆ ಇಡೀ ಕಥೆಯ ನೂರಾರು ಸಾಲುಗಳ ಆತ್ಮ ಅಲ್ಲೇ ಅಡಗಿರುತ್ತದೆ. ಕಡೆಯ ಅದೊಂದು ಪುಟ್ಟ ಸಾಲು ಅಥವಾ ಪದ ಇಡೀ ಕತೆಯನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದು ಬಿಡುತ್ತದೆ.
ತಣ್ಣಗೆ ಹರಿವ ನದಿಯಷ್ಟೇ ಚೇತೋಹಾರಿಯಾದ ಬರಹದ ಶೈಲಿಯ ರಂಜನಿ ಕೀರ್ತಿ ಅವರ ಈ ಪುಸ್ತಕದ ಓದು ಅಪ್ಯಾಯಮಾನ ಎನಿಸುವುದು ಖಚಿತ.
Binding
Soft Bound
Number of Pages
105
Publisher
Harivu Books
Publication Year
2026
Author
Ranjani Keerthi
Height
1 CMS
Length
22 CMS
Weight
100 GMS
Width
14 CMS
Language
Kannada