Product Description
ಅನೇಕ ವಿಜ್ಞಾನಿಗಳು ಹಾಗೂ ಪ್ರಜ್ಞಾವಂತರು ಫಲಜ್ಯೋತಿಷವನ್ನು ಮಾನಸಿಕ ಕಾರಣಗಳಿಗಾಗಿ ನಂಬುತ್ತಾರೆ. ಈ ವಿದ್ಯಾವಂತರು ತಮಗರಿವಿಲ್ಲದಂತೆಯೇ, ಜ್ಯೋತಿಷಿಗಳನ್ನು ಗ್ರಹಗಳ ಸ್ಥಾನಗಳಿಗನುಸಾರವಾಗಿ, ತಾರ್ಕಿಕವಾಗಿ ತಮ್ಮ ಜೀವನದಲ್ಲಿ ಸಂಭವಿಸುವ ಘಟನೆಗಳನ್ನೂ, ಭವಿಷ್ಯವನ್ನೂ ನುಡಿಯುವ ಮನಶ್ಶಾಸ್ತ್ರಜ್ಞರು ಎಂದು ಭಾವಿಸಿರುತ್ತಾರೆ.
ಜ್ಯೋತಿಷದ ಗಿರಾಕಿಗಳು ಬಹುತೇಕ ಸಂದರ್ಭಗಳಲ್ಲಿ, ಜ್ಯೋತಿಷದ ವೈಚಾರಿಕತೆಯನ್ನು ಪ್ರಶ್ನಿಸುವಲ್ಲಿ ಆಸಕ್ತಿ ತೋರುವುದಿಲ್ಲ.
ಪ್ರಸ್ತುತ, ಫಲಜ್ಯೋತಿಷ ನಂಬುವಿರಾ? ಕೃತಿಯ ಲೇಖಕರಾದ ಡಾ|| ಎಸ್. ಬಾಲಚಂದ್ರರಾವ್, ಜ್ಯೋತಿಷಕ್ಕೆ ಸಂಬಂಧಿಸಿದಂತೆ ಜನರ ನಂಬಿಕೆಗಳನ್ನು ವಸ್ತುನಿಷ್ಠವಾಗಿ ಇಲ್ಲಿ ಹಲವು ಉದಾಹರಣೆಗಳ ಸಹಿತ ಚರ್ಚಿಸಿದ್ದಾರೆ.