Quantity
Product Description
Sharmishte | Dr Beluru Raghunandan
ದೇವಯಾನಿಯರ ಕಥೆಯಲ್ಲಿ ಮನುಷ್ಯರ ಮನದಾಳದಲ್ಲಿ ಹುದುಗಿರುವ ಆದಿಮ ವೈರುಧ್ಯ, ಪ್ರತಿರೋಧ ಮತ್ತು ವಿರೋಧಾಭಾಸಗಳು ಹಾಸು ಹೊಕ್ಕಾಗಿರುವುದರಿಂದ, ಅದು ಆಧುನಿಕ ಭಾರತೀಯ ಸಾಹಿತ್ಯ ನಾಟಕಗಳಲ್ಲಿ ಹೊಸ ಹೊಸ ಬಗೆಗಳಲ್ಲಿ ಮರುಕಳಿಸುತ್ತಾ ಬರುತ್ತಿವೆ. ಕನ್ನಡ ರಂಗಭೂಮಿಯಲ್ಲಿ ಈ ಹಿಂದೆ ಆದ್ಯರಂಗಚಾರ್ಯರು ಮತ್ತು ಗಿರೀಶ್ ಕಾರ್ನಾಡರು ಈ ಬಗೆಯ ನಾಟಕ ರಚನೆ ಮಾಡಿ ಅವು ರಂಗ ಪುಯೋಗಗಳಿಗೂ ಒಳಗಾಗಿವೆ. ಬೇಲೂರು ರಘುನಂದನ ಅವರು ಈ ಹಳೆಯ ವಸ್ತುವನ್ನು ಹೊಸ ದೃಷ್ಟಿಯಿಂದ ನೋಡಿದ್ದಾರೆ. ಇದು ಆದ್ಯರಂಗಾಚಾರ್ಯರ ನಾಟಕದಂತೆ ವೈಚಾರಿಕ ನಾಟಕವಲ್ಲ. ಅಥವಾ ಗಿರೀಶ್ ಕಾನ್ನಾಡರ ಯಯಾತಿಯಂತೆ ಪಾಶ್ಚಿಮಾತ್ಯ ಅಸ್ತಿತ್ವವಾದಿ ಸಿದ್ಧಾಂತಕ್ಕೆ ಮಾಡಿದ ಭಾರತೀಯ ಅನುವಾದವಲ್ಲ. ಪ್ರಸ್ತುತ ಕೃತಿಯಲ್ಲಿ ಕಥೆಯೊಳಗಿನ ಪಾತ್ರ ಸನ್ನಿವೇಶಗಳ ವೈರುಧ್ಯ. ಮತ್ತು ಆಳವಿಸ್ತಾರಗಳನ್ನು ನೀಡಿ ಈ ವ್ಯಸನಗಳ ಕಥೆಗೆ ಒಂದು ಇತ್ಯಾತ್ಮಕ ಅಂತ್ಯವನ್ನು ನೀಡಲು ರಘುನಂದನರು ಪ್ರಯತ್ನಿಸಿದ್ದಾರೆ. ಮೂಲ ಕತೆಯ ಜಾಡನ್ನೇ ಹಿಡಿದು ಮುಂದುವರೆದು ಪರಿಣಾಮದಲ್ಲಿ ಪೂರ್ತಿ ಬದಲಾವಣೆ ಮಾಡಿದ್ದಾರೆ. ಸಂಘಕ್ಷ ಅಂತಿಮವಾಗಿ ಸಹಬಾಳ್ವೆಯಲ್ಲಿ ಕೊನೆಗೊಳ್ಳುತ್ತದೆ. ಈ ಅಂತ್ಯವನ್ನು ಬಲವಂತವಾಗಿ ಹೇರದೆ ಮೂಲ ಕತೆಯ ನೂಲುಗಳನ್ನು ಹೊಸ ಬಗೆಯ ನೇಯ್ಗೆಯಲ್ಲಿ ಅಳವಡಿಸಿರುವುದು ಮೆಚ್ಚಿನ ವಿಷಯ. ಸಾಹಿತ್ಯವಾಗಿ ಶಕ್ತವಾಗಿರುವ ನಾಟಕ ಕೃತಿ ರಂಗಕೃತಿಯಾಗಿಯೂ ಬೆಳಗಲಿ ಎಂದು ಹಾರೈಸುತ್ತೇನೆ
Author
Dr Beluru Raghunandan
Binding
Soft Bound
ISBN-13
9788196266134
Number of Pages
100
Publication Year
2025
Publisher
Concave Media CO
Height
1 CMS
Length
22 CMS
Weight
200 GMS
Width
14 CMS
Language
Kannada