Select Size
Quantity
Product Description
'ಕುವೆಂಪು ಬರಹಗಳ ಓದಿನ ರಾಜಕಾರಣ' ಎಂಬ ವಿಷಯದ ಬಗ್ಗೆ ಅಧ್ಯಯನ ನಡೆಸಿ ಸಿದ್ಧಪಡಿಸಿದ ಪ್ರಬಂಧ. ಕುವೆಂಪು ಅವರ ಬಗ್ಗೆ ಹಲವು ವಿಮರ್ಶಾತ್ಮಕ ಬರಹ ಪ್ರಕಟವಾಗಿವೆ. ಅವುಗಳ ಸಾಲಿನಲ್ಲಿ ಸೇರುವ ಮಹತ್ವದ ಪುಸ್ತಕವಿದು.
ನವೋದಯ ಕಾಲದ ಕವಿ ಕುವೆಂಪು ಅವರು ಎಲ್ಲ ಕಾಲಕ್ಕೂ ಸಲ್ಲುವ ಪ್ರಖರ ಚಿಂತನೆ ಮೈಗೂಡಿಸಿಕೊಂಡವರು. ವೈದಿಕ ರಾಜಕಾರಣದ ಬಗ್ಗೆ ತನ್ನದೇ ವಿಶಿಷ್ಟ ರೀತಿಯಲ್ಲಿ ತಕರಾರು ಎತ್ತುತ್ತ ಬಂದ ಕುವೆಂಪು ತಮ್ಮ ಮಹಾಕಾವ್ಯ, ಕಾದಂಬರಿ, ಕವಿತೆಗಳ ವಿಶಾಲ ನೆಲೆಗಟ್ಟು ರೂಪಿಸಿಕೊಂಡಿದ್ದರು. ಈ ಪುಸ್ತಕದಲ್ಲಿ ಒಟ್ಟು ಒಂಬತ್ತು ಅಧ್ಯಾಯಗಳಿವೆ. ಪ್ರಾಸ್ತಾವಿಕ ರೂಪದಲ್ಲಿರುವ ಮೊದಲ ಅಧ್ಯಾಯವು ಸಮಕಾಲೀನ ಕಾಲಘಟ್ಟದಲ್ಲಿ ಕುವೆಂಪು ಅವರ ಮರು ಓದಿನ ಅಗತ್ಯದ ಬಗ್ಗೆ ಚರ್ಚಿಸುತ್ತದೆ. ಎರಡನೆ ಅಧ್ಯಾಯವು ಕುವೆಂಪು ಓದಿನ ಚರಿತ್ರೆ ಅಂದರೆ ಅವರ ವಿವಿಧ ಸಾಹಿತ್ಯ ಪ್ರಕಾರಗಳ ಬಗ್ಗೆ ಮಾಹಿತಿ ನೀಡುತ್ತದೆ. ಮೂರನೆ ಅಧ್ಯಾಯದಲ್ಲಿ ಲೇಖಕ ಮತ್ತು ಓದುಗರ ಅಂತರ್ಗತ ಸಂಬಂಧಗಳನ್ನು ವಿವರಿಸುವ ಲೇಖಕರು ಕುವೆಂಪು ಅವರ ಬದುಕು, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಬಗ್ಗೆ ವಿವರಿಸುತ್ತಾರೆ. ನಾಲ್ಕನೇ ಅಧ್ಯಾಯದಲ್ಲಿ ಕಾದಂಬರಿ, ನಾಟಕಗಳ ಬಗ್ಗೆ ಚರ್ಚಿಸಲಾಗಿದೆ. ಬ್ರಾಹ್ಮಣರ ಕಣ್ಣಿನಲ್ಲಿ ಕುವೆಂಪು ಬರಹಗಳನ್ನುಐದನೆ ಅಧ್ಯಾಯ ಕಟ್ಟಿಕೊಡುವ ಲೇಖಕರು ದಲಿತ ಕಣ್ಣಿನಲ್ಲಿ ಕುವೆಂಪು ಬರಹಗಳನ್ನು ಹೇಗೆ ನೋಡಬಹುದು ಎನ್ನುವ ಅಂಶವನ್ನು 6ನೇ ಅಧ್ಯಾಯದಲ್ಲಿ ಕಟ್ಟಿಕೊಡಲಾಗಿದೆ. ಶೂದ್ರರ ಕಣ್ಣಲ್ಲಿ ಕುವೆಂಪು ಬರಹಗಳು ಏಳನೆಯ ಅಧ್ಯಾಯದಲ್ಲಿದೆ. ಎಲ್ಲ ಗಡಿಗಳನ್ನು ತೂರಿ ಕುವೆಂಪು ಬರಹ ಹೇಗೆ ಅನಿಕೇತನವಾಗುತ್ತದೆ ಎನ್ನುವ ವಿಷಯವನ್ನು 8ನೆ ಅಧ್ಯಾಯದಲ್ಲಿ ಚರ್ಚಿಲಾಗಿದೆ. 9ನೇ ಅಧ್ಯಾಯದಲ್ಲಿ ಕುವೆಂಪು ಓದಿನ ಕೊಂಡಿ ನೀಡಿರುವ ಲೇಖಕರು ಸೃಜನಶೀಲ ಲೇಖಕನನ್ನು ಶಿಸ್ತಿನಿಂದ ಓದುವ ಅಗತ್ಯವನ್ನು ವಿವರವಾಗಿ ಬರೆದಿದ್ದಾರೆ
Weight
300 GMS
Length
22 CMS
Width
14 CMS
Height
3 CMS
Author
R Chalapati
Publisher
Kuvempu Bhashaa Bharathi Pradhikaara
Publication Year
2016
Number of Pages
278
Binding
Soft Bound
Language
Kannada