Select Size
Quantity
Product Description
ಕೃಷಿಕಾರ್ಮಿಕರು ಮತ್ತು ಗೇಣಿದಾರರು ನಮ್ಮ ದೇಶದಲ್ಲಿ ಬಹುಕಾಲದಿಂದ ಅತ್ಯಂತ ಹೀನಾಯವಾದ ದಬ್ಬಾಳಿಕೆಗೆ ಗುರಿಯಾಗುತ್ತಾ ಬಂದಿದ್ದಾರೆ. ನಮ್ಮ ಶ್ರೇಣೀಕೃತ ಸಮಾಜದಲ್ಲಿ ಶತಮಾನಗಳ ಕಾಲ ಜನರು ಕರಾಳ ಮತ್ತು ಘೋರ ಜೀವನವನ್ನು ಜೀವಿಸಿದ್ದಾರೆ. ಊಳಿಗಮಾನ್ಯ ವ್ಯವಸ್ಥೆಯು ಕಾಲಾನುಕ್ರಮದಲ್ಲಿ ವಿವಿಧ ಸ್ವರೂಪ ಗಳನ್ನು ತಳೆಯುತ್ತಾ ಬಂದಿದೆ, ಆದರೆ ಉದ್ದಕ್ಕೂ ದೌರ್ಜನ್ಯದ ಪ್ರಮಾಣವು ಹೆಚ್ಚು ಕಡಿಮೆ ಜಾಸ್ತಿಯಾಗೇ ಇದ್ದಿತು. ಕಳೆದ ಹಲವು ಶತಮಾನಗಳಲ್ಲಿ ಜಮೀನ್ದಾರಿ ಪದ್ಧತಿಯು ಅನೇಕ ರೂಪಗಳಲ್ಲಿ ಅಭಿವ್ಯಕ್ತವಾಗಿದೆ. ಮಹಾರಾಷ್ಟ್ರದ ಕೊಂಕಣದಲ್ಲಿ ಈ ಪಿಡುಗು ವ್ಯಕ್ತವಾಗಿದ್ದು ಖೋತಿ ವ್ಯವಸ್ಥೆಯಡಿಯಲ್ಲಿ. ಅದು ಸಾಕಷ್ಟು ದೀರ್ಘ ಕಾಲ ಜೀವಂತವಾಗಿದ್ದಿತು. ಸ್ವತಃ ತಾನೇ ಕಾರ್ಪಣ್ಯ ಮತ್ತು ತೇಜೋವಧೆಗೆ ಗುರಿಯಾಗಿದ್ದು ನಂತರ ಜನತೆಯ ವಿಮುಕ್ತಿಯ ಹರಿಕಾರನಾಗಿ ಶೋಭಿಸಿದ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರು ಖೋತಿಯೆಂಬ ದುಷ್ಟ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಅದರ ನಿರ್ಮೂಲನೆಗಾಗಿ ಪಣತೊಟ್ಟು ಉಗ್ರವಾದ ಹೋರಾಟವನ್ನು ಸಂಘಟಿಸಿದರು. ಈ ಕೆಲಸದಲ್ಲಿ ಅವರೊಡನೆ ಭಾಯಿ ಚಿತ್ರೆ, ಸುರ್ಬಾನಾನಾ, ನಾರಾಯಣ ನಾಗು ಪಾಟೀಲ್ ಮುಂತಾದ ಘಟಾನುಘಟಿಗಳು ಕೈಜೋಡಿಸಿದ್ದರು. ಅದೊಂದು ಚಾರಿತ್ರಿಕ ಹೋರಾಟವಾಗಿತ್ತೆಂಬುದು ನಿಜ, ಆದರೆ ಅಂದಿನ ಕೇಡಿನ ವ್ಯವಸ್ಥೆಯು ನಿರ್ನಾಮವಾಗಿದೆಯೆಂದು ಬಗೆಯಲಾಗದು. ಹೋರಾಟವು ಮುಂದುವರೆದಿದೆ ಮತ್ತು ಮುಂದುವರೆಯುತ್ತಿದೆ
Weight
200 GMS
Length
22 CMS
Width
14 CMS
Author
Dr N Gayathri
Publisher
Nava Karnataka Publications Pvt Ltd
Publication Year
2018
Number of Pages
148
Binding
Soft Bound
Language
Kannada