Quantity
Product Description
‘ಗದ್ಯಗಂಧಿ’: ಕವಿತೆಗಳು ಕವಿ ಎಂ. ಆರ್. ಕಮಲ ಅವರ ಕವನ ಸಂಕಲನ. ಈ ಕೃತಿಯ ಕುರಿತು ಬರೆಯುತ್ತಾ ನೆನಪುಗಳ ಜೊತೆ ಹರಿವ ಕವಿ ಮನಸು ಒಂದೊಂದೇ ನೆನಪನ್ನೂ ಪೊಣಿಸುತ್ತಾ ಸಾಗುತ್ತದೆ. ಕೃತಿ ಪರಿಚಯಕ್ಕೆಂದು ಅವರೇ ಬರೆದ ಸಾಲುಗಳು- ‘ಕಾಲಕ್ಕೇ ಉಸಿರುಗಟ್ಟಿದೆ. ಋತುಮಾನಗಳು ಆಯಾಸದಿಂದ ರೆಪ್ಪೆ ಮುಚ್ಚಿ ತೆರೆಯುತ್ತಿವೆ. ಸಾವಿರ ಸಂಬಂಧಗಳನ್ನು ನೇಯ್ದು ಮಾಡಿದ ಅವಳ ಸೀರೆ ಅಲ್ಲಲ್ಲಿ ಎಳೆ ಬಿಟ್ಟುಕೊಳ್ಳುತ್ತಿದೆ. ರಾಗ ಮಾಲಿಕೆಯ ನೆನಪುಗಳಲ್ಲಿ `ಮೋಹನ' ರಾಗ ಬಂದು ಹೋಗಿದ್ದೇ ತಿಳಿಯಲಿಲ್ಲ. ಬದುಕಿನ ಮೃದಂಗದ `ತೀರ್ಮಾನ'ಗಳು ಆದಿಯೋ ಅಂತ್ಯವೋ? ಬೆಳಕಿನ ಮೇಲೆ ಕತ್ತಲ ಹೊದಿಕೆಯೋ, ಕತ್ತಲಿನ ಮೇಲೆ ಬೆಳಕಿನ ಹೊದಿಕೆಯೋ? ತಿಳಿಯುತ್ತಿಲ್ಲ. ಮಳೆಹನಿಗಳ ನಡುನಡುವೆ ದಾರಿ ಮಾಡಿಕೊಂಡು ಓಡಾಡುತ್ತಿದ್ದವಳು, ನಿಶ್ಯಬ್ದದಲ್ಲಿ ಶಬ್ದವನ್ನು ಹುಡುಕಿಕೊಂಡಿದ್ದವಳು! ಅವಳಿಗೂ ವಿಸ್ಮೃತಿಯ ನದಿಗೆ ಜಾರುವ ಭಯ! ಹಾಗೆಂದೇ ಎದೆಯ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಒಂದೊಂದೇ ನೆನಪಿನ `ನಕ್ಷತ್ರ'ವನ್ನು ತೆಗೆದು ಗೋಡೆಗೆ, ಬೀದಿಗೆ ತೂಗು ಹಾಕುತ್ತಿದ್ದಾಳೆ. ಬಂದವರೆಲ್ಲ ಅದರ ಹೊಳಪಿನಲ್ಲಿ ಒಳಗು-ಹೊರಗನ್ನು ನೋಡಿಕೊಳ್ಳಲಿ! ಅವಳ ನೆನಪುಗಳಿಗೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಿವೆ. ಕಾಲದಲ್ಲಿ ಮಾಸದ ಚೆಲುವಿದೆ. ವರ್ತಮಾನದ ಸಂಕಷ್ಟಗಳಿಗೆ ಸವಾಲೊಡ್ಡುವ ಸತ್ವವಿದೆ. ಸೊಗಡಿನ ಒಂದು ಅವರೆ ಹೊಲ, ಒಂದೇ ತೆಂಗಿನ ಗಿಡದ ನೆನಪು ಕಾಲಕ್ಕೆ ಉಸಿರು ತುಂಬಬಲ್ಲದು!’ ಹೀಗೆ ಮಾಗಿದ ಬದುಕು ಸಾಗಿದ ದಾರಿಯ ತುಂಬಾ ಅಲೆದಾಡುವ ಇಲ್ಲಿಯ ಕವಿತೆಗಳು ಎಂಥಹವರನ್ನು ಸೆಳೆದು ನಿಲ್ಲಿಸುತ್ತವೆ.
Author
M R Kamala
Binding
Soft Bound
Number of Pages
72
Publication Year
2020
Publisher
Kathana Prakashana
Height
1 CMS
Length
22 CMS
Weight
100 GMS
Width
14 CMS
Language
Kannada