Quantity
Product Description
ಚಾಳು ಪ್ರತಿ ಕ್ಷಣವೂ ರೊಟ್ಟಿ ಹಿಟ್ಟಿನ, ಕುದಿಯುವ ಅನ್ನದ, ಲಕ್ಸ್ ಸೋಪಿನ, ನಾವು ಮೇಲು ನೀವು ಕೀಳು ಮತ್ತು ಕೆಲವೊಮ್ಮೆ ಕಳೆದು ಹೋದ ಯಾರದೋ ನೆನಪುಗಳ ವಾಸನೆಯಿಂದ ಘಮ ಘಮಿಸುತ್ತಿರುತ್ತದೆ. ಸಮಯ ಇಲ್ಲಿ ಹೆಪ್ಪುಗಟ್ಟಿ ಕಲ್ಲಾಗಿ, ಚಾಳಿಗೆ ಹತ್ತಿಕೊಂಡಿರುವ ಸಣ್ಣ ಗಟಾರದ ಹರಿಯದೆ ಸಿಕ್ಕಿಹಾಕಿಕೊಂಡಿರುವ ನೀರಲ್ಲಿ ಮುಳುಗಿ ಹೋಗಿದೆ. (ತುದಿಯಿಲ್ಲದ ನೆರಳುಗಳು)
ಮಾಳವಾಟದ ದಾರಿ ಮುಂದೆ ಹೋಗಿ ಯಳ್ಳೂರು ಎಂಬ ಊರಿಗೆ ಮುಟ್ಟುತ್ತಿತ್ತು. ಆಗೊಬ್ಬರು ಈಗೊಬ್ಬರು ಅಡ್ಡಾಡುತ್ತಿದ್ದದ್ದು ಬಿಟ್ಟರೆ ಯಾರ ಸುಳಿವೂ ಆ ಜಾಗದಲ್ಲಿ ಕಾಣುತ್ತಿರಲಿಲ್ಲ. ಮಳೆಗಾಲದಲ್ಲಿ ಉದ್ದುದ್ದವಾಗಿ ಎದ್ದು ನಿಂತಿರುವ ಬೆಳೆಗಳ ನಡುವೆ ದೂರದಲ್ಲಿ ಆಗೊಮ್ಮೆ ಈಗೊಮ್ಮೆ ಪುಟ್ಟ ಪುಟ್ಟ ಇರುವೆಯ ಸಾಲಿನಂತೆ ಕಾಣುವ ರೈಲು ಕಣ್ಣಿಗೆ ಬೀಳುತ್ತಿತ್ತು. ಅಲ್ಲಿಂದ ನಮ್ಮ ಗಲ್ಲಿಯ ಮನೆಗಳು ಕಡ್ಡಿಪೆಟ್ಟಿಗೆಯ ಡಬ್ಬಿಗಳನ್ನು ಬಿಡಿಬಿಡಿಯಾಗಿ ಸಾಲಿನಲ್ಲಿ ನಿಲ್ಲಿಸಿದಂತೆ ಕಾಣುತ್ತಿದ್ದವು.
Binding
Soft Bound
Author
Devaraj Chikanalli
Number of Pages
104
Publisher
Prathama Prakashana
Publication Year
2026
Height
1 CMS
Length
22 CMS
Weight
100 GMS
Width
14 CMS
Language
Kannada