ನಕ್ಕರೆ ಮನಸ್ಸಿನ ದುಗುಡ ಮಾಯವಾಗುತ್ತದೆ. ನಕ್ಕು ಹಗುರಾಗಿರಿ ಎಂಬ ಮಾತು ಇದನ್ನು ಸೂಚಿಸುತ್ತದೆ. ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿ ಮದ್ದು ಇನ್ನೊಂದಿಲ್ಲ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ನಗೆ ಗೊಂಚಲು’ ತುಣುಕುಗಳನ್ನು ರಚಿಸಿರುವ ಶ್ರೀ ಎಸ್. ಎನ್. ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಖ್ಯಾತ ನಗೆ ಬರೆಹಗಾರರು. ಕಚಗುಳಿಯಾಡಿಸಿ ನಗಿಸುವಂಥ ಈ ತುಣುಕುಗಳಿಗೆ ಶ್ರೀ ರೋಹಿಣಿ ಚಿತ್ರ ರಚಿಸಿದ್ದಾರೆ. ನಿಮ್ಮ ನಗು ಬರಿಯ ಮುಗುಳಿನಲ್ಲಿ ಮುಗಿಯುವುದಿಲ್ಲ; ಚಟಾರನೆ ಸಿಡಿದು ಅರಳುತ್ತದೆ.