Product Description
ಕೆಲವು ಬೀಜಗಳು ಅಂತರಂಗದಲ್ಲೇ ಕಾವು ಬೇಡುತ್ತಾ ಕುಳಿತಿದ್ದು ಯಾವುದೋ ಮುಹೂರ್ತದಲ್ಲಿ ಕವಚ ಸಿಗಿದು ಸ್ಫೋಟಗೊಳ್ಳುತ್ತವೆ. ಅಂಬೆಗಾಲಲ್ಲಿ ನಡೆಯಲು ಕಲಿಯುವ ಬದಲಿಗೆ ಹಾರಲು ಆರಂಭಿಸುತ್ತವೆ. ಜಯರಾಮ್ ಅಂಥ ಹಾರಾಟಗಾರರು. ಕವಿತೆಯ ಬಗೆಗೆ, ಕವನದ ಹುಟ್ಟಿನ ಬಗೆಗೆ ಮೂಲಭೂತ ಚಿಂತನೆ ನಡೆಸುವುದು, ಶಬ್ಧ, ಹಾಡು, ರಾಗಗಳ ಅಂತಸ್ಸೂತ್ರವನ್ನು ಧೇನಿಸುತ್ತ ಸಿಕ್ಕುಬಿಡಿಸುವುದು ಇವರ ಪ್ರಮುಖ ಕಾವ್ಯೋದ್ಯೋಗವಾಗಿದೆ. ಹಳೆಯ ದೃಶ್ಯಗಳ ತೆರೆಸರಿಸುತ್ತ, ಹೊಸತದೊಂದನ್ನು ಉಜ್ಜಿ ನೋಡುವ ಕಳಕಳಿ ಉಳ್ಳವರು ಇವರು. ಜನತೆಯ ಬಗೆಗೆ ಅಂತರ್ದೃಷ್ಟಿ ಹರಿಸಿ ಭಾಷೆಯತ್ತ ವಾಲುತ್ತಾರೆ. ಪುಟ್ಟ ಕೈಗಳಿಂದ ಜಗತ್ತನ್ನು ಎಟುಕಿಸಿಕೊಳ್ಳುವ ಬಾಲಕನಾಗುವುದು ಅವರಿಗೆ ಸಾಥ್ಯವಾಗಿರುವುದರಿಂದ ಇಂಥ ರಚನಾಸ್ಥಿತಿ ಅವರಿಗೆ ಮೈಗೂಡಿದೆ...
ರಚನಾಶಿಲ್ಪದ ದೃಷ್ಟಿಯಿಂದಂತೂ ಅವರದು ಧ್ವನಿ ಮಾರ್ಗವನ್ನು ಹಿಡಿದ, ವ್ಯಂಗ್ಯದಿಂದ ಸಮಸ್ಯೆಗಳನ್ನು ಶೋಧಿಸುವ, ಅಪಾರ ಪ್ರಮಾಣದ ಸಹೃದಯತೆಯನ್ನು ಬೀಗುವ ಒಂದು ವ್ಯವಸ್ಥಿತ ಪ್ರಯತ್ನವಾಗಿದೆ. ಅವರು ಇದರಲ್ಲಿ ಅಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಯಾವುದೇ ಬಗೆಯ ಭಿಡೆ ಇಲ್ಲದೇ ಹೇಳಬಯಸುತ್ತೇನೆ.