Quantity
Product Description
ಒಂದು ಬಡದೇಶದ ಹಳ್ಳಿಗಾಡಿನ ರೈತಾಪಿ ಕುಟುಂಬದಲ್ಲಿ ಜನಿಸಿ ಹೈಸ್ಕೂಲ್ ಮೆಟ್ಟಿಲನ್ನೂ ದಾಟದ ಒಬ್ಬ ವ್ಯಕ್ತಿ ತನ್ನ 44 ವರ್ಷಗಳ ಜೀವಿತಾವಧಿಯಲ್ಲಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬನಾದ ಅಸಾಧಾರಣ ಕಥೆಯಿದು.
ಸಚಿವರು, ರಾಜಕಾರಣಿಗಳು, ನ್ಯಾಯಾಧೀಶರು ಹಾಗೂ ಪೊಲೀಸರೂ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಯಾವುದೇ ಪಾಪಪ್ರಜ್ಞೆಯಿಲ್ಲದೆ ಕೊಲೆ ಮಾಡಿಸಿದ ಪಾಪಿಯ ರಕ್ತ ಚರಿತ್ರೆಯಿದು. ಎರಡು ದೇಶಗಳನ್ನು ನಡುಗಿಸಿ ತಾನು ಗಳಿಸಿದ ಆಸ್ತಿಯಲ್ಲಿ ಅರ್ಧದಷ್ಟನ್ನು ಬಡಜನರಿಗಾಗಿಯೇ ವ್ಯಯಿಸಿದ ನೂತನ ರಾಬಿನ್ ಹುಡ್ನ ಕಥನವಿದು.
ತನ್ನ ಕ್ರೌರ್ಯ ಮತ್ತು ಪವರ್ನಿಂದಲೇ ಎಲ್ಲರಲ್ಲೂ ಭಯಹುಟ್ಟಿಸಿ ಕಡೆಗೆ ಇಲಿಯಂತೆ ಬಿಲಸೇರಿ ಅನಾಥ ಶವವಾದ ದುರಹಂಕಾರಿಯ ರೌದ್ರ ಬದುಕಿನ ಚಿತ್ರಣವಿದು.
ಈ ಪುಸ್ತಕವು 'ಗಾಡ್ ಫಾದರ್' ಕಾದಂಬರಿಯಷ್ಟೇ ರೋಮಾಂಚಕವಾಗಿದ್ದು ಪುಟದಿಂದ ಪುಟಕ್ಕೆ ಕುತೂಹಲವನ್ನು ಬೆಳೆಸುತ್ತ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಈ ಮೈನವಿರೇಳಿಸುವ ಕಥನ ಲೇಖಕರ 101 ನೆಯ ಕೃತಿಯಾಗಿದೆ.
Author
D V Guru Prasad
Binding
Soft Bound
Number of Pages
200
Publication Year
2024
Publisher
Sapna Book House Pvt Ltd
Height
2 CMS
Length
22 CMS
Weight
300 GMS
Width
14 CMS
Language
Kannada