Product Description
೧೯೯೩ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಪಿ. ಲಂಕೇಶ್ ಅವರು ಸೃಜನಶೀಲತೆಯ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ಚಲನಚಿತ್ರ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿಯೂ ತಮ್ಮ ಹೆಜ್ಜೆಯ ಗುರುತುಗಳನ್ನು ಮೂಡಿಸಿದ ವಿಶಿಷ್ಟ, ವಿಲಕ್ಷಣ ಪ್ರತಿಭೆ. ನವ್ಯ-ದಲಿತ-ಬಂಡಾಯ ಮನೋಧರ್ಮದ ಕೃತಿಗಳನ್ನು ರಚಿಸಿದ ಅವರು ನೀಡಿರುವ ಕಾಣಿಕೆಗಳು ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಕೃತಿಗಳೇ ಆಗಿವೆ. ನವ್ಯ ಮತ್ತು ನವ್ಯೋತ್ತರ ಅವಧಿಯ ಕೆಲವು ಪ್ರತಿಭೆಗಳನ್ನು ಬೆಳೆಸಿದ ಕೀರ್ತಿಯೂ ಅವರದಾಗಿದೆ. ವಿವಾದಗಳನ್ನು ಸೃಷ್ಟಿಸುವ, ಬೆಳೆಸುವ ಕೇಂದ್ರಬಿಂದುವೂ ಅವರಾಗಿದ್ದುದು, ಅವರ ನಿರ್ಭೀತ, ಸ್ವತಂತ್ರ, ವಿಡಂನಾತ್ಮಕ ವ್ಯಕ್ತಿತ್ವದ ಸಹಜ ಪರಿಣಾಮವೇ ಆಗಿತ್ತು.