Product Description
ನಿರೀಕ್ಷಿತ ಅಥವಾ ಅನಿರೀಕ್ಷಿತ - ಹೀಗೆ ಯಾವುದಾದರೂ ಒಂದು ಫಜೀತಿಗೆ ಸಿಕ್ಕಿಕೊಳ್ಳುವುದು ಗ್ಯಾರಂಟಿ ಎಂದುಕೊಂಡೇ ‘ರಾಮಿ’ಯವರ ದಿನಚರಿ ಪ್ರಾರಂಭವಾಗುತ್ತದೆ. ಅಂದು ಕೊಂಡಂತೆ ಫಜೀತಿ ಇವರಿಗೆದುರಾಗುತ್ತದೆ. ಮುಖಾಮುಖಿಯ ಗಂಭೀರ ಸಂದರ್ಭದಲ್ಲಿ ಅದನ್ನು ಎದುರಿಸಲು ಅವರಿಗಿರುವ ಮಾರ್ಗ ಒಂದೇ : ಅದು ಹಾಸ್ಯಪ್ರಜ್ಞೆ. ಮುಂದೆಲ್ಲ ಸಲೀಸಾಗುತ್ತದೆ. ಯಾವುದೇ ಫಜೀತಿಯನ್ನು ಎದುರಿಸುವುದು ಅಷ್ಟೇನೂ ಕಷ್ಟವಲ್ಲ ಎಂಬುದನ್ನು ಮನಗಾಣುತ್ತಾರೆ, ಮನಗಾಣಿಸುತ್ತಾರೆ. ಫಲಿತಾಂಶ - ಅರಳಿದ ಮನಸ್ಸು. ರಾಮಿ ಎಂಬ ಹೆಸರಿನಲ್ಲಿ ಹಲವು ವರ್ಷಗಳಿಂದ ಲೇಖನಗಳನ್ನು ಬರೆದು ನಮ್ಮನ್ನು ನವಿರಾಗಿ ನಗಿಸಿರುವ, ನಗಿಸುತ್ತಿರುವ ಶ್ರೀ ಎ. ಎಸ್. ರಾಮಕೃಷ್ಣರ ಲೇಖನಗಳ ಸಂಗ್ರಹ ಈ ಹಾಸ್ಯವಾಹಿನಿ.