Product Description
ಮಹಾಭಾರತದ ನಿಜವಾದ ನಾಯಕಿ ದ್ರೌಪದಿ. ಯಜ್ಞಕುಂಡದಿಂದ ಹುಟ್ಟಿಬಂದು ಯಾಜ್ಞಸೇನಿಯೆನಿಸಿದ ಈಕೆ ಕೌರವರಿಂದ ಅಪಮಾನಿತಳಾಗಿ ತನ್ನ ಹೃದಯದಲ್ಲಿ ಪ್ರತೀಕಾರದ ಬೆಂಕಿಯನ್ನು ಕಟ್ಟಿಕೊಂಡು ಬದುಕಿದವಳು. ಮಹಾಭಾರತವು ಧರ್ಮರಾಯನ ಮೂಲಕ ಧರ್ಮ ಪರಿಪಾಲನೆಯನ್ನು ಬೋಧಿಸುವುದಲ್ಲದೆ ದ್ರೌಪದಿಯ ಅಸಾಮಾನ್ಯ ಬದುಕಿನ ಬವಣೆಗಳ ಮೂಲಕ ಹೆಣ್ಣಿನ ಜೀವನಶ್ರದ್ಧೆಯನ್ನೂ ಅವಳ ಅದಮ್ಯ ಛಲವನ್ನೂ ಗುರಿಸಾಧನೆಯ ಸಂಕಲ್ಪವನ್ನೂ ಸಾರುತ್ತದೆ. ಪ್ರಸಿದ್ಧ ಲೇಖಕಿ ದೇವಕಿ ಮೂರ್ತಿಯವರ ಈ 'ಯಾಜ್ಞಸೇನಿ' ದ್ರೌಪದಿಯ ಕಣ್ಣಿನ ಮೂಲಕ ಇಡೀ ಮಹಾಭಾರತವನ್ನು ಪರಿಶೀಲಿಸುತ್ತ, ಆ ಮಹಾಕಾವ್ಯದ ಮನ ಕಲಕುವ ಸನ್ನಿವೇಶಗಳನ್ನು ಪರಿಶೀಲಿಸುತ್ತ, ಆ ಮಹಾಕಾವ್ಯದ ಮನ ಕಲಕುವ ಸನ್ನಿವೇಶಗಳನ್ನು ಹೃದಯಸ್ಪರ್ಶಿಯಾಗಿ ನಿರೂಪಿಸುವ ಒಂದು ಅಪರೂಪದ ಕಾದಂಬರಿ.