Product Description
ಆಧುನಿಕ ಕನ್ನಡ ಸಾಹಿತ್ಯದ ಅತ್ಯುಚ್ಚ ಸಿದ್ಧಿ-ಸಾಧನೆಗಳ ಪ್ರತೀಕವಾಗಿರುವ ಶ್ರೀ ಕುವೆಂಪು ಅವರು ೧೯೫೫ರಲ್ಲಿ ಮೊದಲ ಬಾರಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಹಿರಿಮೆಯನ್ನು ತಮ್ಮದಾಗಿಸಿಕೊಂಡವರು. ಕನ್ನಡ ಸಾಹಿತ್ಯದ ಹಿರಿಮೆಯನ್ನು ರ್ಟ್ರಾಯ ಮತ್ತು ಅಂತರರ್ಟ್ರಾಯ ಮಟ್ಟಗಳಲ್ಲಿ ವಿಸ್ತರಿಸಿದಂಥವರು. ಸಾಹಿತ್ಯದ ಮತ್ತು ಚಿಂತನೆಯ ಉನ್ನತ ಶಿಖರಗಳನ್ನು ಏರಿ ನಿಂತವರು. ‘ಜಗದ ಕವಿ’ ‘ಯುಗದ ಕವಿ’ ಎಂದು ಕೀರ್ತಿತರಾಗಿರುವಂಥವರು. ಪಂಪ-ಹರಿಹರ-ಕುಮಾರವ್ಯಾಸರಂತೆ ಕನ್ನಡದ ಕೀರ್ತಿ ಶಿಖರದ ಪ್ರತೀಕವಾಗಿರುವಂಥವರು; ಒಂದು ಸಾಹಿತ್ಯ ಯುಗದ ಪ್ರವರ್ತಕರಾಗಿರುವಂಥವರು. ಕುವೆಂಪು ಅವರ ನಿಕಟವರ್ತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ|| ಪ್ರಧಾನ್ ಗುರುದತ್ ಈ ಪುಸ್ತಕದ ಲೇಖಕರು.