Product Description
ಚಿಳ್ಳೆಪಿಳ್ಳೆಗಳೊಂದಿಗೆ ತಮ್ಮನ ಮನೆಗೆ ಹೊರಟಿದ್ದರು ಲೇಖಕಿ. ಬೇಟೆಗಾರರು ಗಾಯಗೊಳಿಸಿದ್ದ ಕಾಡುಹಂದಿಯೊಂದು ಎದುರಾಯಿತು. ಗಾಯಗೊಂಡು ರೋಷದಿಂದ ಕುದಿಯುವ ಹಂದಿ. ಭಾರಿ ಅಪಾಯದ ಸನ್ನಿವೇಶ. ಲೇಖನಿಯನ್ನೇ ಖಡ್ಗ ಮಾಡಿಕೊಂಡು ಸ್ವೋರ್ಡ್ ಫೈಟ್ ಮಾಡಿ ಹಂದಿಯನ್ನು ಹಿಮ್ಮೆಟ್ಟಿಸಬೇಕು. ಆದರೆ ಇವರ ಕೈಗೆ ಸಿಕ್ಕಿದ್ದು ಒಂದು ಒಣ ರೆಂಬೆ. ಅದನ್ನೇ ನೆಲಕ್ಕೆ ಅಪ್ಪಳಿಸುತ್ತ ಹಾಹಾ ಹೂಹೂ ಎಂದು ಜೋರಾಗಿ ಬೊಬ್ಬೆ ಹಾಕಿದರು. ಪ್ರಾಣ ರಕ್ಷಣೆಗಿದ್ದ ಏಕೈಕ ಮಾರ್ಗವೆಂದರೆ ಅದೊಂದೇ. ಬೊಬ್ಬೆಗೆ ಹೆದರಿದ ಹಂದಿ ಒಂದು ಕ್ಷಣ ನಿಂತಿ ಕೆಕ್ಕರಿಸಿ ನೋಡಿತು. ಅದಕ್ಕೇನೆನ್ನಿಸಿತೋ ಕೊನೆಗೆ ಹಾಳಾಗಲಿ ನಿಮ್ಮ ಬೊಬ್ಬೆ ಎನ್ನುವಂತೆ ಮುಖ ಕಿವಿಚಿಕೊಂಡು ಗುಟುರುಗುಡುತ್ತ ದಾರಿಬಿಟ್ಟು ಕಾಡಿಗಿಳಿಯಿತು. ಮೃಗ-ಯಾ-ವಿನೋದ ಶ್ರೀಮತಿ ಭುವನೇಶ್ವರಿ ಹೆಗಡೆ ಅವರ ನಗೆ ಲೇಖನಗಳ ಸಂಗ್ರಹ.