Quantity
Product Description
ಈ ಕಾದಂಬರಿ ಒಂದು ಸಸ್ಪೆನ್ಸ್ ಡ್ರಿಲ್ಲರ್ ವರ್ಗಕ್ಕೆ ಸೇರುತ್ತದೆ ಅನ್ನುವುದಕ್ಕಿಂತ ಕಾದಂಬರಿಯ ಎಲ್ಲಾ ವರ್ಗಕ್ಕೂ ಸೇರುತ್ತದೆ ಅನ್ನಬಹುದು. ಕಾದಂಬರಿಯಲ್ಲಿ ಸಮಾಜದಿಂದ ನಿರಾಕರಿಸಲ್ಪಟ್ಟ ಕೆಲ ಪಾತ್ರಗಳಿವೆ, ಜನಾಂಗಗಳಿವೆ ಮತ್ತು ಕರ್ಣ ಕಠೋರವಾದ ಪದಗಳಿವೆ, ಪ್ರೇಮ, ಕಾಮ ಮತ್ತು ಅದರ ಸನ್ನಿವೇಶಗಳಿವೆ. ಖಂಡಿತವಾಗಿಯೂ ಈ ಕಾದಂಬರಿ ಮಡಿವಂತರಿಗಲ್ಲ. ಅಕಸ್ಮಾತ್ ನೀವು ಸರಳ, ಶುದ್ಧ, ಸಾಮಾನ್ಯ ಮನೆಮನೆ ಕತೆಯುಳ್ಳ ಕಾದಂಬರಿಯ ಹುಡುಕಾಟದಲ್ಲಿದ್ದರೆ ಅಂತವರಿಗೆ ಇದೊಂದು ಅಸಹ್ಯದ ಕಾದಂಬರಿಯಾಗಬಹುದು. ದಯವಿಟ್ಟು ಇದನ್ನು ಖರೀದಿಸುವ ಪ್ರಯತ್ನ ಮಾಡಬೇಡಿ. ಬದಲಿಗೆ ಸಮಾಜದಲ್ಲಿ ನಮ್ಮೊಡನೆಯೇ ಬದುಕುತ್ತಿರುವ ವಿವಿಧ ವ್ಯಕ್ತಿಗಳ ಬಗ್ಗೆ, ಸಮಾಜದ ಡಾಂಭಿಕತೆ, ಮುಖವಾಡ, ಮೋಸ, ವಿಲಕ್ಷಣ ಪ್ರೇಮ, ವಿಕೃತತೆ, ಕ್ರೌರ್ಯದ ಪರಿಚಯ ಬೇಕಿದ್ದಲ್ಲಿ ಮಾತ್ರ ಈ ಪುಸ್ತಕ ನಿಮ್ಮದಾಗಬಹುದು. ಯಾವುದೇ ಪೂರ್ವಾಗ್ರಹವಿಲ್ಲದೆ ಸಮಾಜದ ಹುಳುಕುಗಳನ್ನು ಕನ್ನಡಿಯಂತೆ ಎತ್ತಿ ತೋರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜೊತೆಗೆ ಕೈಮ್ ಜಗತ್ತಿನ ಹೊಸ ಹೊಳಹುಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ಇನ್ನು ನೀವುಂಟು ಮತ್ತು ಈ ಕಾದಂಬರಿಯುಂಟು. ಸಾದತ್ ಹಸನ್ ಮಾಂಟೋವಿನ ಕೆಳಗಿನ ಸಾಲುಗಳು ನಿಮಗಾಗಿ ಅಂತ ಹೇಳುತ್ತಾ...
"If you cannot bear these stories then the society is unbearable. Who am I to remove clothes of the society which itself is naked"
Author
Divakar Azad
Binding
Soft Bound
ISBN-13
9789334339222
Number of Pages
580
Publication Year
2025
Publisher
Black Sheep Publications
Height
5 CMS
Length
22 CMS
Weight
600 GMS
Width
14 CMS
Language
Kannada