Product Description
ಕನ್ನಡ ಕಲಿಯಲಿಕ್ಕೂ ಆಟಗಳಿವೆಯೇ!?
ಅಂತ್ಯಾಕ್ಷರಿ ಆಟ, ಪದಗಳ ಸರಪಳಿ ಆಟ, ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಗಳ ಆಟ, ಸಮಾನ ರೂಪವಿರುವ/ಸಾದೃಶ್ಯ ಪದಗಳ ಆಟ, ತತ್ಸಮ - ತದ್ಭವ ಪದಗಳ ಆಟ, ಏಕಪದ ನೀಡುವ ಆಟ, ಪ್ರಾಸಪದಗಳ ಆಟ, ನಾಲಗೆ ತೊಡರುಗಳ ಆಟ, ಒಗಟುಗಳ ಆಟ, ಗಾದೆಗಳ ಆಟ, ನುಡಿಗಟ್ಟು/ ಪಡೆನುಡಿ ಆಟ, ಕಥೆ ಹೇಳುವ ಆಟ, ಪದ್ಯ/ಶಿಶುಗೀತೆ ಹೇಳುವ ಆಟ, ಸಂಭಾಷಣೆ ಹೆಣೆಯುವ ಆಟ, ಆಶು ಭಾಷಣ ಮಾಡುವ ಆಟ, ರಸಪ್ರಶ್ನೆ ಕೇಳುವ ಆಟ, ಸಮಾಸ ಪದಗಳ ಆಟ, ಸಂಧಿ ಪದಗಳ ಆಟ, ಕಿಮ್ ಆಟ, ಪದ ರಚಿಸುವ ಆಟ, ಅಕ್ಷರ ಪಲ್ಲಟದಿಂದ ಹೊಸ ಪದ ರಚಿಸುವ ಆಟ, ಬಿಟ್ಟ ಸ್ಥಳ ತುಂಬಿಸುವ ಆಟ, ಪ್ರತ್ಯಯಗಳಿಂದ ಪದ ರಚಿಸುವ ಆಟ, ಪದಗಳನ್ನು ಸರಿಹೊಂದಿಸುವ ಆಟ, ಉಕ್ತಲೇಖನದ ಆಟ, ಪತ್ರ/ಸಂಭಾಷಣೆ/ಕಥೆ ಬರೆಯುವ ಆಟ, ಪದಕೋಶದ ಆಟ, ಪದಗಳ ರಮ್ಮಿ ಆಟ, ಪದಬಂಧದ ಆಟ, ಅಕ್ಷರ ದಾಳಗಳ ಆಟ, ಕನ್ನಡ ಡೈಸ್ ಬಾಗಲ್ ಆಟ, ಒಗಟು ಕಥೆಗಳ ವರ್ಣಮಾಲೆ ಬೋರ್ಡ್ ಆಟ, ಕ್ರಿಯಾಪದಗಳ ವಾಕ್ಯರಚನೆಯ ಬೋರ್ಡ್ ಆಟ ಹೀಗೆ ಹಲವಾರು ಆಟಗಳು ಕನ್ನಡ ಭಾಷಾ ಕಲಿಕೆಯನ್ನು ಸರಳವಾಗಿಸಿವೆ.