Product Description
ತಾಯ್ತನವೆಂಬುದು ಪ್ರಕೃತಿ ಹೆಣ್ಣಿಗೆ ಮಾತ್ರವೇ ನೀಡಿರುವ ಕೊಡುಗೆ ಎಂಬುದನ್ನು, ಗರ್ಭ ಧರಿಸುವುದು ಕಾಯಿಲೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಬಂದ ಕೂಡಲೇ ಗಾಬರಿಯಿಂದ ಅಳುವ ಮಗು, ಸೃಷ್ಟಿಯ ಅದ್ಭುತಗಳಲ್ಲೊಂದು. ಈ ಅದ್ಭುತ ಶಿಶುವಿನ ಮುಂದಿನ ದಿನಗಳನ್ನು ಸಹ್ಯಗೊಳಿಸುವಲ್ಲಿ ಬೇರೆಲ್ಲರಿಗಿಂತ ಹೆಚ್ಚಾಗಿ ತಾಯಿಯ ಪಾತ್ರ ಮಹತ್ವದ್ದು. ಗರ್ಭ ಧರಿಸಿದಂದಿನಿಂದಲೇ ತಾಯ್ತನದ ಹೊಣೆಗಾರಿಕೆ ಪ್ರಾರಂಭವಾಗುತ್ತದೆ. ನಿಮ್ಮ ಮಗುವನ್ನು ಪೋಷಿಸುವಲ್ಲಿ, ಮಗುವಿಗೆ ಕಾಯಿಲೆ ಬಂದ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಕ್ರಮಗಳ ಕುರಿತು, ಆಹಾರ ಮತ್ತು ಪಾಲನೆ - ಪೋಷಣೆ ಕುರಿತು ಡಾ|| ಎಚ್. ಗಿರಿಜಮ್ಮ ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಿದ್ದಾರೆ.