Select Size
Quantity
Product Description
ಇದು ಲೇಖಕಿಯವರ ಬಾಲ್ಯದ ನೆನಪುಗಳ ಕಟ್ಟಿಟ್ಟ ಲಲಿತ ಪ್ರಭಂದಗಳ ಸಂಕಲನ. ಯಾವುದೇ ಪೂರ್ವಾಗ್ರಹವಿಲ್ಲದೇ, ಎನೋ ಒಂದನ್ನು ಓದುಗರಿಗೆ ಮನದಟ್ಟು ಮಾಡಿಸಲೇ ಬೇಕೆನ್ನುವ ಹಪಹಪಿಯಿಲ್ಲದೆ ಅವರ ಮನದ ಭಾವವನ್ನು ಬಿಚ್ಚಿಡುವ ಪ್ರಮಾಣಿಕ ಪ್ರಯತ್ನವನ್ನು ಶುಭಶ್ರೀ ಮೇಡಮ್ ಮಾಡಿದ್ದಾರೆ. ಎಲ್ಲ ಲೇಖನಗಳು ಬಹಳ ಚಿಕ್ಕವು, 2-3 ಪುಟಗಳೊಳಗೆ ಮುಗಿದಿವೆ. ಕರಾವಳಿಯಂಚಿನ ಗ್ರಾಮದಲ್ಲಿ ಅರಳಿದ ಅವರ ಬಾಲ್ಯದ ಕಂಪು ಈ ಪ್ರಬಂದಗಳಲ್ಲಿವೆ. ಹೆಚ್ಚು ಕಡಿಮೆ ನನ್ನ ಬಾಲ್ಯವು 99% ಹಾಗೆಯೇ ಕಳೆದ್ದಿದ್ದರಿಂದ ಹೆಚ್ಚು ಕನೆಕ್ಟ್ ಆಯಿತು. ಮುದ್ದು ಮಾಡಿ ಅಕ್ಕರೆಗರೆವ ಅಜ್ಜಿ, ಕಾಡಿನ ಹಣ್ಣುಗಳ ಸಂಗ್ರಹ, ಪರೀಕ್ಷೆ - ಓದುವ ಟೈಮ್ ಟೇಬಲ್, ಮುಗ್ದ ಜೀವಗಳು, ನಾಯಿ ಕರು ಮುಂತಾದ ಮೂಕ ಜೀವಗಳು, ಪಾರಿಜಾತ, ಕಡಲು ಕೃಷ್ಣ ಹಾಗೂ ನವಿಲುಗರಿ ಹೀಗೆ ವೈವಿದ್ಯ ವಿಷಯಗಳ ಚಿಕ್ಕ ವಿವರಣೆಯ ಲೇಖನಗಳಿವೆ. ನಿಮ್ಮ ನೆನಪಲ್ಲಿ ಮಾತ್ರ ಹಸಿರಾಗಿರುವ ದಣಪೆಯಾಚೆಗಿನ ಬದುಕಿಗೆ ಕೈಹಿಡಿದು ಕರೆದೊಯ್ಯುತ್ತದೆ.
Weight
100 GMS
Length
22 CMS
Width
14 CMS
Height
1 CMS
Author
Shubhashree Bhat
Publisher
Veeraloka Books Pvt Ltd
Publication Year
2022
Number of Pages
88
ISBN-13
9789394942134
Binding
Soft Bound
Language
Kannada