Product Description
                            
                                
ಕಥೆಗಾರ ಬಿ. ಜನಾರ್ಧನ್ ಭಟ್ ಅವರ ಸಣ್ಣ ಕತೆಗಳ ಕೃತಿ ’ಜಗತ್ ಪ್ರಸಿದ್ಧ ಸಣ್ಣ ಕತೆಗಳು’. ಈ ಅನುವಾದಿತ ಕಥೆಗಳು ವಿವಿಧ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. 63 ವೈವಿಧ್ಯಮಯ ಪಾಶ್ಚಾತ್ಯ ಸಣ್ಣ ಕಥೆಗಳಿದ್ದು, ಪ್ರಾದೇಶಿಕ -ಸಾಂಸ್ಕೃತಿಕ-ಕಥಾ ಶೈಲಿಗಳ ವಿವಿಧ್ಯತೆ ಹಾಗೂ ಕಾಲಘಟ್ಟಗಳನ್ನು ಪ್ರತಿನಿಧಿಸುತ್ತವೆ. ಲ್ಯಾಟಿನ್ ಅಮೆರಿಕ, ಇಟಾಲಿಯನ್, ಅರೆಬಿಕ್ ಮುಂತಾದ ಪ್ರಾಂತ್ಯಗಳ ಕಥೆಗಾರರ ಕಥೆಗಳು ಇಲ್ಲಿವೆ. ಕಥೆಗಳ ಆಯ್ಕೆಯ ಬಗ್ಗೆ ಅನುವಾದಕರೇ ಹೇಳಿಕೊಂಡಂತೆ ’ಈ ಸಂಪುಟದ ಕಥೆಗಳಲ್ಲಿ ಕ್ಲಾಸಿಕಲ್ ಅಥವಾ ಹಳೆಯ ಶೈಲಿಯ ಕಥೆಗಳು (ಜೀವನಾನುಭವದ ಸರಳ ರೇಖಾತ್ಮಕ ಕಥೆಗಳು), ಆಶ್ಚರ್ಯದ ಅಂತ್ಯ ಕೊಡುವ ಕಥೆಗಳು, ಬದುಕಿನ ವಿಶಿಷ್ಷಸತ್ಯಗಳನ್ನು ಮತ್ತು ಅನುಭವಗಳನ್ನು ಹೊಸ ಬೆಳಕಿನಲ್ಲಿ ನೋಡುವ ಕಥೆಗಳು, ಜಗತ್ತಿನ ಬೇರೆ ಬೇರೆ ಸಂಸ್ಕೃತಿಗಳನ್ನು ಪರಿಚಯಿಸುವ ಕಥೆಗಳು ಇಲ್ಲಿವೆ’ ಎಂದಿದ್ದಾರೆ.