Quantity
Product Description
"ನೋಡಿ ಈ 27 ವರ್ಷಗಳಿಂದ ನಾನೇನು ನನ್ನ ಮಗನನ್ನ ನೋಡ್ಕೊಂಡು ಬಂದಿದ್ದಿನಲ್ಲ, ಅವನು ಹೇಳ್ತಿರೋದ್ರಲ್ಲಿ ಸತ್ಯ ಎಷ್ಟಿದೆ ಸುಳ್ಳು ಎಷ್ಟಿದೆ ಅನ್ನೋದನ್ನ ಅವನ ಕಣ್ಣುಗಳನ್ನ ನೋಡಿಯೇ ಹೇಳಿಡ್ತಿನಿ. ಈ ವಿಚಾರವಾಗಿ ಅವನು ಖಂಡಿತವಾಗಿಯೂ ಸತ್ಯ ಹೇಳಿದ್ದಾನೆ. ಒಬ್ಬ ತಾಯಿಯಾಗಿ ಅದನ್ನಷ್ಟೇ ನಾನು ಹೇಳಬಲ್ಲೆ. ಬಾಕಿಯದ್ದು ನಿಮಗೆ ಬಿಟ್ಟಿದ್ದು, ಈಗಷ್ಟೆ ಗಂಡನನ್ನ ಕಳ್ಕೊಂಡಿದ್ದಿನಿ, ಮತ್ತೀಗ ಮಗನನ್ನ ಕಳ್ಕೊಳೋದಕ್ಕೆ ನಾನು ತಯಾರಿಲ್ಲ" ಎಂದು ಕಣ್ಣೆರೆಸಿಕೊಳ್ಳುತ್ತಾ ತಮ್ಮ ಕೈಯಲಿದ್ದ ಮೂರು ಲಕ್ಷ ಮೌಲ್ಯದ ಚೆಕ್ಕನ್ನು ಹಿಮವಂತನೆದುರಿಗಿರಿಸಿದವರ ಕೈಗಳು ಸಣ್ಣಗೆ ಅದುರುತ್ತಿತ್ತು. ಇತ್ತ ತಮ್ಮೆದುರಿಗಿದ್ದ ಚೆಕ್ಕಿನ ಮೇಲಿದ್ದ ಹಣದ ಸಂಖ್ಯೆಯು ಚಾಂದಿನಿಯನ್ನು ಸಣ್ಣಗೆ ಅಚ್ಚರಿಗೊಳಿಸುತ್ತಿರಲು, ಅದರೆಡೆಗೆ ಒಮ್ಮೆ ದೃಷ್ಟಿಬೀರಿ ನಂತರ ತನ್ನ ಮಾತನ್ನು ಮುಂದುವರೆಸಿದ ಹಿಮವಂತನು "ನಾನು ಈ ಕೇಸನ್ನು ವಹಿಸಿಕೊಳ್ಳುವುದಕ್ಕೆ ನನಗೇನೂ ಸಮಸ್ಯೆಯಿಲ್ಲ. ಆದರೆ ಅದಕ್ಕಿಂತ ಮುಂಚೆ ನಾನು ನಿಮ್ಮ ಮಗನಾದ ಸುಹಾಸ್ ನತ್ತಿರ ಒಂದುಸಲ ಮಾತಾಡೇಕು. ಅದಾದ್ದೇಲೆ ಮುಂದಿನ ತೀರ್ಮಾನಕ್ಕೆ ಬರುತ್ತೇನೆ" ಎಂದವನಲ್ಲಿ ಈ ಕೇಸಿನ ಕುರಿತಾಗಿ ಒಂದಿಷ್ಟು ಪ್ರಶ್ನೆಗಳಿದ್ದವು.
ಅತ್ತ "ನಿಹಾರಿಕ ಮರ್ಡರ್ ಕೇಸು" ಹಿಮವಂತನ ಆಫೀಸಿನೊಳಗೆ ಕಾಲಿಡುವುದಕ್ಕೆ ಸದ್ದಿಲ್ಲದಂತೆ ಕಾಯುತ್ತಿತ್ತು!!
Binding
Soft Bound
Author
Koushik Koodurasthe
Number of Pages
150
Publisher
Sneha Book House
Publication Year
2026
Height
2 CMS
Length
22 CMS
Weight
200 GMS
Width
14 CMS
Language
Kannada