Select Size
Quantity
Product Description
ಶ್ರೀ ವಿವೇಕಾನಂದ ಕಾಮತರ ಪದರುಗಳು ಕಾದಂಬರಿ ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಸೇರ್ಪಡೆ. ಒಂದು ಹೆಣ್ಣಿನ ಅಂತರಂಗವನ್ನು ಮನೋ-ವೈಜ್ಞಾನಿಕ ನೆಲೆಯಲ್ಲಿ ನೋಡುವ ಮತ್ತು ಆ ಮೂಲಕ ಕಥನ ಮತ್ತು ವಿಜ್ಞಾನವನ್ನು ಬೆಸೆಯುವ ಬರಹವಿದು. ಇಲ್ಲಿ ಅಂತಃಕರಣವಿದೆ, ಪ್ರೀತಿಯಿದೆ, ವಾತ್ಸಲ್ಯವಿದೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನೊಂದ ಹೆಣ್ಣಿನ ಸಮಾಧಾನ ಕೊಡಬೇಕೆನ್ನುವ ಸಾಮಾಜಿಕ ಜವಾಬ್ಧಾರಿಯಿದೆ . ನಾವು ಚಂದ್ರನ ಮೇಲೆ ಕಾಲಿಟ್ಟು ಗ್ರಹ ತಾರೆಗಳೆಡೆಗೆ ಕೈಚಾಚಿದರೂ, ಪ್ರಖರ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸಲು ಹೊರಟರೂ,ಮನುಷ್ಯನ ಮನಸ್ಸು ನಮಗಿನ್ನೂ ನಿಗೂಢ. ಮನುಷ್ಯ ವರ್ತನೆಗಳು ನಮ್ಮ ಊಹೆಗೆ ನಿಲುಕಿದವು. ಅಂತಹ ಒಂದು ಗಾಢಗುಟ್ಟಿನ ಹಿಂದೆ ಹೊರಟ ಈ ಕಾದಂಬರಿಯು ಮನೋಲೋಕದ ಅನೇಕ ಪದರುಗಳನ್ನು ದರ್ಶಿಸುತ್ತದೆ. ನುರಿತ ಮತ್ತು ಸೂಕ್ಷ್ಮ ಕತೆಗಾರರರಾದ ವಿವೇಕಾನಂದ ಕಾಮತರು, ವಿಭಿನ್ನ ಪಾತ್ರಗಳು ನಮ್ಮ ಓದಿಗೆ ಸುಲಲಿತವಾಗಿ ಇಳಿಯುವಂತೆ ಈ ಕಾದಂಬರಿಯನ್ನು ಸೃಷ್ಟಿಸಿದ್ದಾರೆ
Weight
300 GMS
Length
22 CMS
Author
Vivekananda Kamath
Publisher
Ankitha Pusthaka
Publication Year
2023
Number of Pages
150
ISBN-13
9789392230776
Binding
Soft Bound
Language
Kannada