Quantity
Product Description
ಜೋಗಿಯವರ ಕತೆಗಳಲ್ಲಿ ಪ್ರಧಾನವಾಗಿ ಕಾಣುವುದು ನಗರ ಬದುಕಿನ ಒಂಟಿತನ, ಒತ್ತಡ, ಸಂಬಂಧಗಳಲ್ಲಿನ ಹಳವಂಡಗಳು. ತನ್ನೊಳಗೆ ಯಾರನ್ನೂ ಗಾಢವಾಗಿ ಒಳಗೊಳ್ಳದ ನಾಗರೀಕ ಬದುಕಿನ ಅಸ್ಥಿರತೆ, ಅಪರಿಚಿತತೆಯನ್ನು ಪ್ರಧಾನವಾಗಿ ಚಿತ್ರಿಸುವಂತದ್ದು. ಸೊಗಸಾದ ಕಥನಗಾರಿಕೆಯ ಶೈಲಿಯನ್ನು, ಓದಿಸಿಕೊಳ್ಳುವ ಗುಣವನ್ನು ಹೊಂದಿರುವ ಕತೆಗಳನ್ನು ಚಿತ್ರಿಸುವುದರಲ್ಲಿ ಜೋಗಿಯವರದು ಪಳಗಿದ ಕೈ. ಸಣ್ಣಕತೆಗಳಲ್ಲಿ ಅನೇಕ ಪ್ರಯೋಗಗಳನ್ನು ಮಾಡಿರುವ ಜೋಗಿಯವರ ಕತೆಗಳ ಮತ್ತೊಂದು ವಿಶಿಷ್ಟಗುಣ ಕತೆಯ ಕುತೂಹಲಕಾರಿ ತಿರುವು, ಅಂತ್ಯ. ಪಾತ್ರಗಳ ಏಕಾಕಿತನ, ಅದನ್ನೆದುರಿಸಲು ಅವು ಹಿಡಿಯುವ ವಿಭಿನ್ನ ಮಾರ್ಗಗಳು ಕುತೂಹಲಕಾರಿ ಎನಿಸುತ್ತವೆ. ಅಲ್ಲದೆ ಅವು ಮನುಷ್ಯನೊಳಗಿನ ಹುಡುಕಾಟದ ತೀವ್ರತೆಯನ್ನು ಹೇಳುವಂತದ್ದು. ಮನುಷ್ಯನ ಪರಂಪರಾಗತ ನಂಬಿಕೆಗಳ ಬುಡವನ್ನೇ ಅಲುಗಾಡಿಸುವಂತಹ ಇವರ ಕಥಾನಕಗಳು ವಿಭಿನ್ನವಾಗಿ ಯೋಚಿಸುವಂತೆ ಮಾಡುತ್ತವೆ
Publisher
Ankitha Pusthaka
Publication Year
2021
Number of Pages
130
Binding
Soft Bound
Author
Jogi (Girish Rao Athwar / Janaki)
Width
20
Weight
300
Length
22
Language
Kannada