Product Description
ಭಾರತದ ಬೇರೆ ಬೇರೆ ಪ್ರದೇಶಗಳ ೧೦೦ ನೀತಿ ಕಥೆಗಳನ್ನು ಇಲ್ಲಿ
ಪರಿಚಯಿಸಿದೆ. ಆಯಾ ಪ್ರದೇಶಗಳ ಸಂಸ್ಕೃತಿ, ಸಭ್ಯತೆ, ಆಚಾರ-ವಿಚಾರ,
ಸಂಪ್ರದಾಯ, ಜನಜೀವನ ಇತ್ಯಾದಿ ವಿಷಯಗಳನ್ನು ತಿಳಿಯಲು
ಇಲ್ಲಿಯ ಕಥೆಗಳು ತುಂಬ ಸಹಾಯಕ
೧೦೦ ಕಥೆ ನೂರಾರು ನೀತಿ ಪ್ರಕಾಶಿಸುವ ವಜ್ರಗಳಿದ್ದಂತೆ.
ಬದುಕಿನುದ್ದಕ್ಕೂ ಝಗಮಗಿಸುವ ದಾರಿದೀಪಗಳು. ಇಲ್ಲಿಯ ಕಥೆಗಳನ್ನು
ಮತ್ತೆ ಮತ್ತೆ ಮೆಲುಕು ಹಾಕುವುದರಿಂದ ಭಾರತದ ಸಂಸ್ಕೃತಿ ಹಾಗೂ
ನೈತಿಕ ಮೌಲ್ಯಗಳ ಬಗ್ಗೆ ನಮ್ಮ ಗೌರವ ಇಮ್ಮಡಿಸುತ್ತದೆ.
ಈ ಅಪರೂಪದ ಕಥೆಗಳನ್ನು ನಾಡಿನ ಜನಪ್ರಿಯ ಲೇಖಕರಾದ
ಎಂ.ವಿ. ನಾಗರಾಜರಾವ್ ಸಂಗ್ರಹಿಸಿ ಕೊಟ್ಟಿದ್ದಾರೆ. ಪ್ರಾಚಾರ್ಯರಾಗಿ
ನಾಲ್ಕು ದಶಕಗಳ ಕಾಲ ವಿದ್ಯಾರ್ಥಿಗಳಿಗೆ ಬೋಧಿಸಿರುವ ಶ್ರೀಯುತರು
೨೦೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು
ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.