Select Size
Quantity
Product Description
ಪ್ರತಿ ಹೆಣ್ಣಿನಲ್ಲೂ ಅಡಗಿರುವ
ಅಂತರಂಗದ ರೂಪ ನಂದಿ ತರಂಗ
ನಂದಿತರಂಗ ಮನದಲ್ಲಿ ಮೂಡಿಸುವ ಮೌನ ತರಂಗ
ನಂದಿತರಂಗ ಮನದ ಮಿಡಿತಗಳ ತರಂಗ
ನಂದಿತರಂಗ ನಡೆಯುತ್ತಿರಲಿ ನಿರಂತರ
ಜೀವನ ನಮ್ಮನ್ನು ಕರೆದುಕೊಂಡು ಹೋಗುವುದಕ್ಕೂ, ನಾವು ಜೀವನವನ್ನು ಕರೆದುಕೊಂಡು ಹೋಗುವುದಕ್ಕೂ ತುಂಬಾ ವ್ಯತ್ಯಾಸ. ಬದುಕಿನ ಈ ಅಂತರದ ಭಾವ ಮನವರಿಕೆ ಆದಾಗ ಜೀವನ ನೋಡುವ ದೃಷ್ಟಿ ಬೇರೆಯಾಗುತ್ತದೆ. ಆಗ ಪ್ರತಿದಿನ ನೋಡುವ ಅದೇ ಜನ, ಸೃಷ್ಟಿ, ವಿಷಯಗಳು ಹೊಸದಾಗಿ ಕಾಣುವುದಕ್ಕೆ ಶುರುವಾಗಿ, ಅನುಭವಕ್ಕೆ ಬಂದಿರುವ ಭಾವಕ್ಕೂ, ಬದುಕುತ್ತಿರುವ ರೀತಿಗೂ ತುಂಬಾ ವ್ಯತ್ಯಾಸ ಕಂಡುಕೊಳ್ಳಲು ಆರಂಭವಾಗುತ್ತದೆ. ಬದುಕಿನ ಈ ಹಂತ ತುಂಬ ವಿಶಿಷ್ಟ.
ಜೀವನದ ಅದೆಷ್ಟೋ ವಿಷಯಗಳು, ಸಂದರ್ಭಗಳು, ನಡೆದು ಬಂದ ದಾರಿ, ಒಂದು ಕ್ಷಣ ಮಿಂಚಿ ಮರೆಯಾಗುತ್ತವೆ. ನಡೆದು ಬಂದ ದಾರಿಗೂ ನಡೆಯಬೇಕಾದ ದಾರಿಗೂ ‘ಜೀವನ ಒಂದು ಪಾಠ’ ಅನ್ನೋ ಉತ್ತರ ಸ್ಪಷ್ಟತೆಯನ್ನು ನೀಡುತ್ತದೆ. ಅರಿವಿಗೆ ಬರದ ಬದುಕಿನ ಭಾಗ, ಅರಿತ ಬದುಕಿನ ಭಾಗ ಅನ್ನುವ ಮಟ್ಟಕ್ಕೆ ಬದಲಾವಣೆಯನ್ನು ಮನ ಅನುಭವಿಸುತ್ತದೆ.
ನನ್ನ ಜೀವನದ ಪಯಣದಲ್ಲಿ ಕಂಡುಂಡ ಅನುಭವದ ನುಡಿಗಳು. ಬದುಕಿನ ದಾರಿಯನ್ನು ಅರಿಯುವ ಪ್ರಯತ್ನದಲ್ಲಿ ಕಂಡ ಬದುಕಿನ ಭಿನ್ನ ರೂಪಗಳ ಭಾವ ‘ನಂದಿ ತರಂಗ ’.
ನೆನಪುಗಳ ಅಂಗಳದಿ ಕರೆತಂದ
ಬದುಕಿನ ಪುಟಗಳ ಮಾತೊಂದು
ಕಥೆಯಾಗಿ ಹೊರತಂದ ರೂಪ
ನಂದಿ ತರಂಗ
------------------------------------------------------------------------------------
ನಂದಿನಿ ಹೂಗಾರ
ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕು ಹುಲಸೂರ ಗ್ರಾಮದ ಶ್ರೀಮತಿ ಅನಸೂಯಾ ಹಾಗೂ ಶ್ರೀ ಅಶೋಕ ಹೂಗಾರ ದಂಪತಿಗಳ ದ್ವಿತಿಯ ಪುತ್ರಿಯಾಗಿರುವ ನಂದಿನಿ ಹೂಗಾರ ಅವರು ಕೃಷಿಕ ಕುಟುಂಬದಲ್ಲಿ ಜನಿಸಿದವರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಕನ್ನಡ ಜಾನಪದ ಸಾಹಿತ್ಯದಲ್ಲಿ ಎಂ.ಎ ಹಾಗೂ ಎಂ.ಫಿಲ್ ಪದವಿಯನ್ನು ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವರು. `ನಂದಿ ತರಂಗ' ಕೃತಿ ಇವರ ಮೊದಲ ಕೃತಿಯಾಗಿದೆ.
Weight
300 GMS
Length
22 CMS
Height
1 CMS
Author
Nandini Hugar
Publisher
Nanditaranga Book House
Publication Year
2023
Number of Pages
152
Binding
Soft Bound
Language
Kannada