Product Description
ಯಾರಿಗಾದರೂ ಒಳ್ಳೆಯ ಸ್ನೇಹಿತರಿರಬೇಕಾದುದು ಅಗತ್ಯವಾದರೂ ಸ್ನೇಹಿತರಿಗೂ ಜತೆಗಾರರಿಗೂ ವ್ಯತ್ಯಾಸವಿದೆ. ಒಂದೊಂದು ಕಾರ್ಯವು ಸಿದ್ಧಿಸಬೇಕಾದರೆ ಸ್ನೇಹಿತನು ಜೊತೆಯಾಗಿದ್ದರೆ ಉಪಯೋಗ ವಾಗದು; ಆಯಾ ಕಾರ್ಯಕ್ಕೆ ಸಂಬಂಧಿಸಿದವರು ಯಾರೆಂಬುದನ್ನು ತಿಳಿದು ಅವರನ್ನು ಕರೆದುಕೊಂಡು ಹೋಗಬೇಕಾಗುತ್ತದೆ.
ಗಂಗಾನದಿ ಪಾಪವನ್ನು, ಚಂದ್ರನು ತಾಪವನ್ನು, ಕಲ್ಪವೃಕ್ಷವು ದೈನ್ಯತನವನ್ನು ಹೋಗಲಾಡಿಸಿದರೆ, ಸಜ್ಜನರ ಸಂಗವು ಪಾಪ, ತಾಪ, ದೈನ್ಯತೆ - ಮೂರನ್ನೂ ತೊಲಗಿಸಬಲ್ಲದು. ದುರ್ಜನರೊಂದಿಗೆ ಸ್ನೇಹ ಸಾಮೀಪ್ಯತೆಗಳು ಎಂದಿಗೂ ಹಾನಿಕರವೇ. ಕೆಂಡವು ಕೈಯನ್ನು ಸುಡುತ್ತದೆ, ಅದು ತಣ್ಣಗಿನ ಇದ್ದಿಲಾದಾಗಲೂ ಮಸಿಮಾಡುತ್ತದೆ.
ಇಂತಹ ಮೇಲಿನ ಅನೇಕ ನೀತಿಗಳನ್ನ, ಸದ್ಗುಣಗಳನ್ನ ಕನ್ನಡನಾಡಿನ ಪುಟಾಣಿಗಳ ಮನದಲ್ಲಿ ಈ ಕೃತಿಯಲ್ಲಿನ ಕಥೆಗಳು ತುಂಬಿ ಅವರನ್ನು ಮುಂದಿನ ಬದುಕಿಗೆ ಸಿದ್ಧಗೊಳಿಸುತ್ತವೆ.