Quantity
Product Description
ಕರ್ನಾಟಕದ ಪುಟ್ಟ ಹಳ್ಳಿಯಾದ ಮಲ್ಲಿಗೆಪೇಟೆಯಲ್ಲಿ ನಾಪತ್ತೆ ಪ್ರಕರಣವೊಂದು ಅಚಾನಕ್ಕಾಗಿ ಸದ್ದು ಮಾಡುತ್ತದೆ. ಕಾದಂಬರಿಯ ಕಥಾನಾಯಕನಾದ, ತನ್ನ ಗೆಳೆಯರ ಬಳಗದಲ್ಲಿ ಜೀತೂ ಎಂದೇ ಕರೆಯಲ್ಪಡುವ 11 ವರ್ಷ ಪ್ರಾಯದ ಅಜಿತ್ ಏಕಾಏಕಿ ಕಾಣೆಯಾಗಿದ್ದಾನೆ. ಪ್ರವಾಸ-ತಿರುಗಾಟಗಳಲ್ಲಿ ವಿಪರೀತವೆಂಬಷ್ಟು ಒಲವಿದ್ದ, ಆದರೆ ಶಿಸ್ತಿನ ಬಾಲಕನಾಗಿದ್ದ ಜೀತು ಹೀಗೆ ಕಾಣೆಯಾಗುವುದೇ ಒಂದು ವಿಚಿತ್ರ. ಜೀತೂನ ಸಹಪಾಠಿಗಳೂ, ಖಾಸಾ ಗೆಳೆಯರೂ ಆಗಿದ್ದ ಸಬಾ, ರಿಷಿ ಮತ್ತು ಚಿಂಟುರನ್ನೊಳಗೊಂಡಂತೆ ಇಡೀ ಮಲ್ಲಿಗೆಪೇಟೆಯನ್ನೇ ಅಚ್ಚರಿಯಲ್ಲಿ ಕೆಡವಿತ್ತು ಈ ಘಟನೆ.
ಅಷ್ಟಕ್ಕೂ ಈ ಜೀತು ಎಲ್ಲಿ ಮಾಯವಾಗಿದ್ದ? ಅವನು ಅಪಾಯದಲ್ಲಿದ್ದನೇ? ಕಾಣೆಯಾಗಿದ್ದ ಜೀತೂನನ್ನು ಹುಡುಕಲು ಅವನ ಗೆಳೆಯರಾದ ಸಬಾ, ರಿಷಿ ಮತ್ತು ಚಿಂಟು ಯಶಸ್ವಿಯಾದರೇ? ತಮ್ಮ ಗೆಳೆಯನ ಪತ್ತೆಗಾಗಿ ಮಲ್ಲಿಗೆಪೇಟೆಯ ಈ ಮೂವರು ಗೆಳೆಯರು ಸ್ಥಳೀಯ ಪೋಲೀಸರೊಂದಿಗೆ ಹೇಗೆ ತನಿಖೆಯಲ್ಲಿ ತೊಡಗಿಸಿಕೊಂಡರು? ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾಗಳೆಂಬ ಹೊಸ ಹಾದಿಗಳನ್ನು ಈ ಮಿಸ್ಸಿಂಗ್ ಪ್ರಕರಣದಲ್ಲಿ ಮಲ್ಲಿಗೆಪೇಟೆಯ ಪೋಲೀಸರು ಮತ್ತು ಚಿಣ್ಣರು ಹೇಗೆ ಬಳಸಿಕೊಂಡರು?
ಗೆಳೆತನ, ಸಾಹಸ, ಸಮಯಪ್ರಜ್ಞೆ, ತಂತ್ರಜ್ಞಾನ... ಇತ್ಯಾದಿಗಳ ಸುತ್ತ ತೆರೆದುಕೊಳ್ಳುವ ಜೀತು ಮತ್ತು ಗೆಳೆಯರ ರೋಚಕ ಕಾದಂಬರಿ...
Author
Prasad Naik
Number of Pages
158
Publication Year
2025
Publisher
Harivu Books
Binding
Soft Bound
Weight
200 GMS
Height
2 CMS
Width
14 CMS
Length
22 CMS
Language
Kannada