Product Description
‘ದಲಿತ ಸಮಾಜ: ಇಂದಿನ ಸವಾಲುಗಳು’ ಸಾಮಾಜಿಕ ಕಳಕಳಿಯ ವೈಚಾರಿಕ ಲೇಖನಗಳ ಸಂಗ್ರಹ. ಪ್ರಸ್ತುತ ಕೃತಿಯಲ್ಲಿನ ಹೆಚ್ಚಿನ ಲೇಖನಗಳು ಬೇರೆ ಬೇರೆ ಸಂದರ್ಭಗಳಲ್ಲಿ ಲೇಖಕರಾದ ಡಾ|| ಜಿಯಾಲಾಲ ಆರ್ಯರವರು ಮಾಡಿದ ಭಾಷಣ, ಬರೆದ ಲೇಖನಗಳ ಸಂಗ್ರಹ. ಈ ಲೇಖನಗಳಲ್ಲಿ ಅವರ ಆಳವಾದ ವಿದ್ವತ್ತು, ವಿಷಯಜ್ಞಾನ, ಅದನ್ನು ಪ್ರಭಾವಕಾರಿಯಾಗಿ ಪ್ರಸ್ತುತ ಪಡಿಸುವ ಶೈಲಿ, ಭಾಷೆಯ ಮೇಲೆ ಪ್ರಭುತ್ವ, ವಿಭಿನ್ನ ಮಗ್ಗುಲುಗಳಿಂದ ಸಮಸ್ಯೆಯನ್ನು ವಿಶ್ಲೇಷಿಸುವ ಪ್ರಾಮಾಣಿಕ ಕಾಳಜಿ ಇವನ್ನೆಲ್ಲ ನಾವು ಕಾಣಬಹುದು. ಸದ್ಯದ ಸಂದರ್ಭದಲ್ಲಿ ಪ್ರಸ್ತುತವೆನಿಸುವ ಈ ಕೃತಿಯನ್ನು ಹಿಂದೀಯಿಂದ ಕನ್ನಡಕ್ಕೆ ಶ್ರೀ ಆರ್.ಪಿ. ಹೆಗಡೆಯವರು ಅನುವಾದಿಸಿದ್ದಾರೆ.