Select Size
Quantity
Product Description
'Only ಪಾಲಿಟಿಕ್ಸ್‘ ಗೋಪಾಲ ಕೃಷ್ಣ ಕುಂಟಿನಿ ಅವರ ರಚನೆಯ ಕತೆಗಳ ಸಂಗ್ರಹವಾಗಿದೆ. ಮರುಭೂಮಿಯ ರಾಜ್ಯವೊಂದರ ರಾಜನಿಗೆ ಒಮ್ಮೆ ಒಂಟೆಗಳೆಲ್ಲಾ ನಕ್ಕಂತೆ ಕನಸು ಬೀಳುತ್ತದೆ. `ಒಂಟೆಗಳೇಕೆ ನಕ್ಕವು?' ಎಂದು ರಾಜ ಪಂಡಿತರ ಸಭೆ ಕರೆದು ಕೇಳುತ್ತಾನೆ. `ಒಂಟೆಗಳು ನಗುವುದಿಲ್ಲ, ನಗುವುದು ಮನುಷ್ಯರು ಮಾತ್ರಾ ದೊರೆಯೇ' ಎಂದು ಪಂಡಿತರು ಹೇಳುತ್ತಾರೆ. ರಾಜ, `ಹಾಗಾದರೆ ನನ್ನ ರಾಜ್ಯದಲ್ಲಿ ನನ್ನ ಪ್ರಜೆಗಳೆಲ್ಲರೂ ನಗುತ್ತಾರೆಯೇ?' ಎಂದು ಅಚ್ಚರಿಯಿಂದ ಕೇಳುತ್ತಾನೆ. ಅದಕ್ಕೆ ಪಂಡಿತರು, `ಮನುಷ್ಯರು ನಗುವುದು ಸಹಜ ಧರ್ಮ' ಎಂದು ವಿವರಿಸುತ್ತಾರೆ. ಮರುದಿನ ಮತ್ತೆ ಪಂಡಿತರ ಸಭೆ ಕರೆದ ರಾಜ, `ಕಳೆದ ರಾತ್ರಿ ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ಅತ್ತಂತೆ ಕಾಣಿಸಿತು' ಎಂದು ಹೇಳುತ್ತಾನೆ. ಪಂಡಿತರು, `ಮನುಷ್ಯರು ಅಳುವುದೂ ಸಹಜಧರ್ಮ' ಎಂದು ವಿವರಿಸುತ್ತಾರೆ. ಮೂರನೇ ದಿನ ರಾಜ ಅದೇ ಪಂಡಿತರ ಸಭೆ ಕರೆದು `ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ನಕ್ಕಂತೆಯೂ, ಒಂಟೆಗಳೆಲ್ಲಾ ಅತ್ತಂತೆಯೂ ಕನಸು ಬಿತ್ತು' ಎಂದು ಹೇಳುತ್ತಾನೆ. ಈಗ ಪಂಡಿತರು ರಾಜನಿಗೆ ಒಂದು ಸಲಹೆ ನೀಡುತ್ತಾರೆ, `ರಾಜನೇ ಮೊದಲು ನೀನು ನಗಲು ಕಲಿ. ನಂತರ ಅಳಲು ಕಲಿ. ನಗು ಮತ್ತು ಅಳುವನ್ನು ಧಿಕ್ಕರಿಸಿದ ನೀನು ರಾಜ್ಯವನ್ನು ಹೇಗೆ ಆಳುವೆ? ನೀನು ನಕ್ಕರೆ ಒಂಟೆಗಳು ನಗಲಾರವು, ನೀನು ಅತ್ತರೆ ಪ್ರಜೆಗಳು ಅಳಲಾರರು.' ಈ ಪುಸ್ತಕ ಈ ಕಾಲದ ರಾಜ ಮತ್ತು ಪ್ರಜೆಗಳ ಕತೆಗಳ ಸಂಗ್ರಹ.
Weight
200 GMS
Length
22 CMS
Width
14 CMS
Height
1 CMS
Author
Gopalakrishna Kuntini
Publisher
Sawanna Enterprises
Publication Year
2023
Number of Pages
168
ISBN-13
9789393224392
Binding
Soft Bound
Language
Kannada