Quantity
Product Description
ಒಂದು ದೇಶದ ಚರಿತ್ರೆಗೆ ಅದರ ಪ್ರಸಿದ್ಧ ಪುರುಷರ ಜೀವಿತ ಕಥೆಯು ಮುಖ್ಯಾಂಗವೆನಿಸುವುದು, ವ್ಯಷ್ಟಿದ್ವಾರಾ ಸಮಷ್ಟಿ ಸ್ವರೂಪವನ್ನೂಹಿಸುವುದು ಐತಿಹಾಸಿಕರ ಪದ್ಧತಿ. ಈ ಪ್ರಕರಣದಲ್ಲಿ ಸಮಷ್ಟಿಯೆಂದರೆ ಬಹುಜನ ಕಾರ್ಯಗಳಾದ ರಾಜಕೀಯ ಅಥವಾ ಸಾಮಾಜಿಕ ಸಮಾರಂಭಗಳು. ವ್ಯಷ್ಟಿಯೆಂದರೆ ಅಂತಹ ಸಮಾರಂಭಗಳ ಮುಖ್ಯ ಪ್ರವರ್ತಕರಾದ ಹಲವು ಮಂದಿ ಗಣ್ಯಪುರುಷರು. ವಿಚಾರ ಮಾಡಿ ನೋಡಿದರೆ, ವಿಜಯನಗರದ ಪ್ರಾದುರ್ಭಾವವನ್ನು ಒಂದು ಬಹುಜನ ಸಮಾರಂಭವೆಂದೂ, ಶ್ರೀ ವಿದ್ಯಾರಣ್ಯರನ್ನು ತತ್ಪವರ್ತಕರಾದ ಪ್ರಜಾಪ್ರಮುಖರೆಂದೂ ಭಾವಿಸಲು ಸಾಕಾದಷ್ಟು ಕಾರಣಗಳು ಕಾಣಬರುತ್ತವೆ. ಇಂದಿಗೆ ಆರು ಶತಾಬ್ದಗಳ ಹಿಂದೆ ಆರ್ಯಧರ್ಮವನ್ನು ಭೂಮುಖದಿಂದ ತೊಡೆದುಹಾಕಲೆಂದು ಬಂದ ಮಹಮ್ಮದೀಯ ಮಹಾಪ್ರವಾಹಕ್ಕೆ ಅಡ್ಡಗಟ್ಟೆ ಹಾಕಿ ಅದನ್ನು ತಡೆದು, ಸ್ವಸಾಮರ್ಥ್ಯದಿಂದ ನಿಲ್ಲುವ ಶಕ್ತಿಯನ್ನು ಹಿಂದೂ ಸಮಾಜಕ್ಕುಂಟುಮಾಡಿಕೊಟ್ಟು, ವೇದಭಾಷ್ಯಾದ್ಯನೇಕ ಗ್ರಂಥ ನಿರ್ಮಾಪಕರಾಗಿ, ವೈದಿಕ ಲೌಕಿಕ ಧರ್ಮ ಸಮನ್ವಯ ಪ್ರದರ್ಶಕರಾಗಿ, ಕರ್ಣಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯರೆಂದು ಹೆಸರ್ಗೊಂಡ ಆ ಮಹಾಮಹಿಮರ ಹೆಸರು ಹಿಂದೂಗಳ ಮತಾಚಾರ ಚರಿತ್ರೆಯಲ್ಲಿ ಹೇಗೋ ಅವರ ರಾಜಕೀಯ ಚರಿತ್ರೆಯಲ್ಲಿಯೂ ಹಾಗೆಯೇ ಸರ್ವ ಸನ್ಮಾನ್ಯವಾಗಿ ಶಾಶ್ವತವಾಗಿ ಬೆಳಗುತ್ತಿರುವುದು. ಅವರು ವೇದಶಾಸ್ತ್ರಜ್ಞರಾಗಿದ್ದಂತೆಯೇ ರಾಜ್ಯ ತಂತ್ರಜ್ಞರಾಗಿಯೂ ಇದ್ದರು; ಧರ್ಮಾಭಿಮಾನಿಗಳಾಗಿದ್ದಂತೆಯೇ ದೇಶಾಭಿಮಾನಿಗಳಾಗಿಯೂ ಇದ್ದರು. ಅಂತಹವರು ಆಗ ಹುಟ್ಟದೆ ಇದ್ದಿದ್ದರೆ ಹಿಂದೂ ಸಮಾಜದ ಗತಿ ಏನಾಗಿರುತ್ತಿತ್ತೆಂಬುದನ್ನು ಊಹಿಸುವುದು ಕಷ್ಟದ ಕೆಲಸ.
Binding
Soft Bound
Author
D V Gundappa (DVG)
Number of Pages
74
Publisher
Saahitya Bhandaara
Publication Year
2020
Height
1 CMS
Length
22 CMS
Weight
100 GMS
Width
14 CMS
Language
Kannada