Select Size
Quantity
Product Description
‘ಹಲ್ಲು 32 ಇರಬಹುದು ಆದರೆ ನಾನು ಬರೆಯೋದು 28 ಕಥನ ಅಷ್ಟೇ’ ಎಂದು ಹಲ್ಲಿನ ಲೋಕದಲ್ಲಿ ಪಯಣ ಹೊರಟವರು ಡಾ ಕೆ ಎಸ್ ಚೈತ್ರಾ. ‘ಜೈ’ ಎಂದೇ ಎಲ್ಲರಿಂದಲೂ ಪ್ರೀತಿಯಿಂದ ಕರೆಸಿಕೊಳ್ಳುವ ಇವರು ಕನ್ನಡ ಪುಸ್ತಕ ಲೋಕದಲ್ಲಿ ಇಲ್ಲವೇ ಇಲ್ಲ ಎನ್ನುವಂತಿರುವ ದಂತ ವೈದ್ಯಕೀಯದ ಬಗ್ಗೆ ಪುಸ್ತಕ ಬರೆದಿದ್ದಾರೆ. ಅದೂ ಎಷ್ಟು ರಸವತ್ತಾಗಿ ಎಂದರೆ ಇದನ್ನು ನೀವು ಓದದೇ ಇರಲು ಸಾಧ್ಯವೇ ಇಲ್ಲ. ತಾವು ದಂತ ವೈದ್ಯದ ವಿದ್ಯಾರ್ಥಿಯಾಗಿದ್ದಾಗಿನ ಅನುಭವಗಳನ್ನು ನಮ್ಮ ಮುಖದಲ್ಲೂ ಮುಗುಳ್ಳಗೆ ಮೂಡುವಂತೆ ಚಿತ್ರಿಸಿರುವ ಚೈತ್ರಾ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತ ಹೆಸರು. ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುವ ಸಾಲನ್ನು ‘ನುಡಿಯಲು ಬಾಯಿ ತೆರೆದರೆ ಮುತ್ತಿನ ಹಾರ ಕಾಣುವಂತಿರಬೇಕು’ ಎಂದು ಈ ಪುಸ್ತಕ ಓದಿದವರು ಅರ್ಥ ಮಾಡಿಕೊಳ್ಳುವಂತಿದೆ ಈ ಕೃತಿ.
Author
Dr K S Chaithra
Binding
Soft Bound
ISBN-13
9788197736742
Publication Year
2024
Publisher
Bahuroopi
Length
20 CMS
Weight
300 GMS
Width
20 CMS
Language
Kannada