ಮೂರು ಕಿರುನಾಟಕಗಳ ಸಂಕಲನ ಇದು. ಹೂವುಗಳು ಅರಳಲಿ ಬಾಲಕಾರ್ಮಿಕರ ಸಮಸ್ಯೆಯ ಮೇಲೆ, ಅಸ್ಪೃಶ್ಯತೆಯ ಭಾವನೆ ಹಿರಿಯರ ಮನಸ್ಸಿನಲ್ಲಿ ಹೂತುಹೋಗಿರುವುದರ ಮೇಲೆ ಬೆಳಕು ಚೆಲ್ಲುತ್ತದೆ. ತಿರುಕನ ಕನಸು ಹಳೆಯ ಕಥೆಯಾದರೂ ಅದರಲ್ಲಿ ಸಮಕಾಲೀನ ವಿಷಯಗಳನ್ನು ಪರಿಣಾಮಕಾರಿಯಾಗಿ ಸೂಚಿಸಲಾಗಿದೆ. ದುರಹಂಕಾರ ಮತ್ತು ದುಶ್ಚಟ ಗುಣಗಳು ಮನುಷ್ಯರ ಮೈದುಂಬಿದಾಗ ಆಗಬಹುದಾದ ಅನಾಹುತಗಳನ್ನು ಇಬ್ಬರು ಅಣ್ಣ-ತಮ್ಮಂದಿರ ಸ್ವಭಾವಗಳ ಮೂಲಕ ಪರಿಚಯಿಸುವ ನಾಟಕ ನ್ಯಾಯಕ್ಕೇ ಜಯ.