ಮಗುವಿಗೆ ಇಂದಿನ ‘ಶ್ರೇಷ್ಠ ಶಾಲೆ’ಯಲ್ಲಿ ‘ಶ್ರೇಷ್ಠ ಶಿಕ್ಷಣ’ ಸಿಗುತ್ತಿದೆಯೆ? ತಾಯಿ-ತಂದೆ ಮಗುವಿಗೆ ಶಾಲೆಯ ಉಪಾಧ್ಯಾಯರಿಗಿಂತ ಉತ್ತಮ ಉಪಾಧ್ಯಾಯರಾಗಲು ಸಾಧ್ಯವಿಲ್ಲವೆ? ಕಲಿಯುವ ಮಗುವಿನ ಬದುಕಿನಲ್ಲಿ ‘ಶಿಸ್ತು’ ಎಂದರೇನು? ಮಗುವಿಗೆ ಶಾಲೆ ಮತ್ತು ಶಿಕ್ಷಕರ ಅಗತ್ಯ ಎಷ್ಟು? ಯಾವ ರೀತಿ ಮಗುವಿನ ಸಾಮರ್ಥ್ಯ ವಿಕಸನವನ್ನು ಸಾಧಿಸಬಹುದು? ನಿಜವಾದ ಕಲಿಯುವ ಮನಸ್ಸನ್ನು ಸೃಷ್ಟಿಸುವುದು ಹೇಗೆ?
ಮನೆಯನ್ನು ಕೂಡ ಒಂದು ವಿದ್ಯಾಲಯವಾಗಿಸುವುದು ಹೇಗೆ? ಇಂದಿನ ಶಾಲಾ ಶಿಕ್ಷಣ ಕ್ರಮವನ್ನು ಮಗುವಿನ ರಕ್ಷಕರು ಹೇಗೆ ಸುಧಾರಿಸಬಹುದು?
ಇಂಥ ಹಲವು ಪ್ರಶ್ನೆಗಳನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.