Quantity
Product Description
ಇಲ್ಲಿನ ಮೂರು ನಾಟಕಗಳು ಪ್ರಾಣಿಗಳ ಸಮಯೋಚಿತ ಬುದ್ಧಿವಂತಿಕೆಯನ್ನು ಮಕ್ಕಳಿಗೆ ತಿಳಿಸುತ್ತವೆ. ಮೆದುಳಿಗೆ ಕೆಲಸ ಕೊಡುವ, ಯೋಚಿಸುವಂತೆ ಮಾಡುವ ಇವು ಬೆಳೆಯುವ ಮಕ್ಕಳಿಗೆ ಪ್ರಯೋಜನಕಾರಿ. ಇಲಿಗಳು ಬೆಕ್ಕಿಗೆ ಗಂಟೆ ಕಟ್ಟಬಲ್ಲವು, ಪ್ರಪಂಚದಲ್ಲಿ ಶ್ರೇಷ್ಠರು ಯಾರೆಂದು ಪರಸ್ಪರ ತಿಳಿಸುತ್ತಾ ತಾನು ಎಲ್ಲರಿಗಿಂತ ಸಣ್ಣವನೆಂಬ ವಿನಯ ತೋರಬಲ್ಲವು. ಅಲ್ಲದೆ ಯಾವುದೇ ಬಂಡವಾಳವಿಲ್ಲದೆ ನಗಣ್ಯ ವಸ್ತುವನ್ನು ಉಪಯೋಗಿಸಿ ಭಾರೀ ಶ್ರೀಮಂತನಾದ ನಾಟಕವೊಂದು ಇಲ್ಲಿದೆ. ಆಶ್ಚರ್ಯವಾಯಿತೇ? ಎಲ್ಲದಕ್ಕೂ ಬುದ್ಧಿವಂತಿಕೆ, ಉತ್ಸಾಹ, ಹಟ ಮತ್ತು ವಿನಯವಂತಿಕೆ ಇದ್ದರೆ ಎಲ್ಲವನ್ನೂ ಗೆಲ್ಲಬಹುದೆಂಬ ಸ್ವಾರಸ್ಯಕರ ಅಂಶವೊಂದಿಲ್ಲಿದೆ. ಅ. ನಾ. ರಾವ್ ಜಾದವ್ ರಂಗಕರ್ಮಿ, ನಟ, ನಾಟಕಕಾರ, ನಿರ್ದೇಶಕರಾಗಿ ಪರಿಚಿತರು. ಮೂಲತಃ ಆಕಾಶವಾಣಿಯ ನಾಟಕ ವಿಭಾಗದ ಆಡಿಷನ್ ಕಲಾವಿದರು. ನಾಟಕ, ಟಿ. ವಿ. ಧಾರಾವಾಹಿ, ಚಲನಚಿತ್ರಗಳಲ್ಲಿ ಪ್ರಸಿದ್ದರು. ಸ್ಥಿರ ಛಾಯಾಗ್ರಾಹಕರಾಗಿ, ರಾಷ್ಟ್ರಮಟ್ಟದ ಪುರಸ್ಕಾರಗಳನ್ನೂ ಪಡೆದಿದ್ದಾರೆ. ಇವರ ಅಸಂಖ್ಯ ಚಿತ್ರಲೇಖನಗಳು ನಾಡಿನ ಶ್ರೀ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಚಾರಣಿಗರಾಗಿ ಹಿಮಾಲಯದವರೆಗೂ ಅಲೆದುಬಂದಿದ್ದಾರೆ. ಮರಗಿಡಗಳ ಅಧ್ಯಯನ ಮತ್ತು ಪಕ್ಷಿ ವೀಕ್ಷಣೆ ಇವರ ಹವ್ಯಾಸ, 'ರಂಗ ವಿಸ್ಮಯ' ನಾಟಕ ತಂಡ ಕಟ್ಟಿ, ಆಸಕ್ತರಿಗೆ ರಂಗ ಶಿಕ್ಷಣ ನೀಡುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಮೂಲಕಥೆಯ. ಇವರ ನಾಟಕ ರೂಪದ 'ಕಿರಗೂರಿನ ಗಯ್ಯಾಳಿಗಳು', 'ಕರ್ವಾಲೊ', 'ತೇಜಸ್ವಿ ಪರಿಸರ ಕಥಾಪ್ರಸಂಗ' ಮತ್ತು 'ಎಂಗ್ಟನ ಪುಂಗಿ' ಕೃತಿಗಳು ನವಕರ್ನಾಟಕ ಪ್ರಕಾಶನ ದಿಂದ ಪ್ರಕಟಗೊಂಡಿವೆ. ಇದೀಗ 'ಬೆಕ್ಕಿಗೆ ಗಂಟೆ ಕಟ್ಟಿದವರು ಯಾರು...?' ಕೃತಿಯನ್ನು ನವಕರ್ನಾಟಕ ಪ್ರಕಟಿಸುತ್ತಿದೆ.
Author
A N Rao Jadhav
Binding
Soft Bound
Number of Pages
72
Publication Year
2025
Publisher
Nava Karnataka Publications Pvt Ltd
Height
1 CMS
Length
22 CMS
Weight
100 GMS
Width
14 CMS
Language
Kannada