Select Size
Quantity
Product Description
‘ಕರ್ನಾಟಕ ವೈಭವ’ ಕೃತಿಯು ಕನ್ನಡದ ಒಂದು ಮಹತ್ವದ ಕೃತಿಯಾಗಿದ್ದು ಇದರಲ್ಲಿ ಕರ್ನಾಟಕದ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪ, ನೃತ್ಯ, ರಂಗಭೂಮಿ, ಸಿನೆಮಾ – ಹೀಗೆ ಹತ್ತುಹಲವು ಕ್ಷೇತ್ರಗಳ ಬಗ್ಗೆ ಆಯಾ ವಿಷಯತಜ್ಞರೇ ಬರೆದಿರುವ ಮಾಹಿತಿಪೂರ್ಣ ಬರಹಗಳಿವೆ. ಕರ್ನಾಟಕದ ಹೆಸರಿನ ಇತಿಹಾಸ, ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ಲಾಂಛನ-ಸಂಕೇತಗಳ ಬಗ್ಗೆ ಮಾಹಿತಿ, ಕರ್ನಾಟಕದಲ್ಲಿ ನಡೆದುಹೋಗಿರುವ ಅತಿಮಹತ್ವದ ಹೋರಾಟಗಳು, ಚಳವಳಿಗಳು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ, ಕನ್ನಡ ನಾಡು-ನುಡಿಯ ಹಿತರಕ್ಷಣೆಗಾಗಿ ನಡೆದಿರುವ ಆಂದೋಲನಗಳು, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಗಳು – ಹೀಗೆ ಹಲವು ವಿಚಾರಗಳ ಸಮಗ್ರ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ. ಕರ್ನಾಟಕ ಮತ್ತು ಕನ್ನಡ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿರುವವರಿಗೆ ಇದು ಅತ್ಯಂತ ಉಪಯುಕ್ತ ಕೃತಿ.
Weight
300 GMS
Length
22 CMS
Width
20 CMS
Height
1 CMS
Author
Various Authors
Publisher
Ayodhya Publications
Publication Year
2023
Number of Pages
252
Binding
Soft Bound
Language
Kannada