ಮನರಂಜನೆಯ ಗಣಿತದಲ್ಲಿ "ಮಾಯಾಚೌಕ" ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಈ ಕ್ಷೇತ್ರಕ್ಕೆ ಭಾರತದ ಕೊಡುಗೆ ಅನನ್ಯ. ನಾರಾಯಣ ಪಂಡಿತನ "ಗಣಿತ ಕೌಮುದಿ"ಯಲ್ಲಿ ವಿಭಿನ್ನ ರೀತಿಯ ಆಕರ್ಷಕವಾದ ಮಾಯಾಚೌಕಗಳ ಹಾಗೂ ಇತರ ಮಾಯಾಕೃತಿಗಳ ರಚನೆಗಳ ಅಧ್ಯಯನವನ್ನು ಮಾಡಿದೆ. ಅನೇಕ ಚೌಕಗಳನ್ನು ರಚಿಸಿ ಅಲ್ಲಿ ಪ್ರತಿ ಅಂಕಣದಲ್ಲೂ ಅಂಕೆಗಳನ್ನು ತುಂಬಿಸಿ ಯಾವ ಕಡೆಯಿಂದ ಕೂಡಿದರೂ ಒಂದೇ ಮೊತ್ತ ಬರುವಂತೆ ಮಾಡುವುದು ಸಾಮಾನ್ಯವೇನಲ್ಲ. ಇವು ಮಾಯಾಲೋಕವನ್ನೇ ಸೃಜಿಸಿ ಮನಸ್ಸಿಗೆ ಮುದ ನೀಡುತ್ತವೆ. ಪ್ರಸ್ತುತ "ಮಾಯಾಚೌಕಗಳ ಸ್ವಾರಸ್ಯ" ಪುಸ್ತಕದಲ್ಲಿ ಇಂತಹ ಆಕರ್ಷಕ ರಚನೆಗಳ ಸವಿಯನ್ನು ಉಣಬಡಿಸಿದೆ.