Select Size
Quantity
Product Description
ನೂರಿಪ್ಪತ್ತು ವರ್ಷಗಳ ಚರಿತ್ರೆಯನ್ನು ಹೊಂದಿದ ಮರಾಠಿ ಕಥನ ಪರಂಪರೆಯಲ್ಲಿ ಮಹಿಳಾ ಲೇಖಕಿಯರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ.ಬರೇ ಸಂಖ್ಯಾತ್ಮಕವಲ್ಲಾ,ಗುಣಾತ್ಮಕ ಬೆಳವಣಿಗೆಯನ್ನೂ ಗುರುತಿಸಬಹುದಾಗಿದೆ.ಆಧುನಿಕವಾದ ಲೇಖಕ-ಲೇಖಕಿಯರ ಟಿಪಿಕಲ್ ಮಾದರಿಯ ಕೃತಿಗಳನ್ನು ಹುಡುಕುವ ನನ್ನ ಕಣ್ಣಿಗೆ ಆಶಾ ಬಗೆಯವರ ಕಥೆ ಕಾದಂಬರಿಗಳು ಕಾಣಿಸಿದವು.
ಮಹಾರಾಷ್ಟ್ರ ಹಾಗೂ ಬಂಗಾಲಿ ಎರಡೂ ಸಂಸ್ಕೃತಿಗಳ ಸಂಘರ್ಷವನ್ನು ಈ ಕಾದಂಬರಿಯಲ್ಲಿ ಆರೋಗ್ಯಕರವಾದ ನೆಲೆಯಲ್ಲಿ ಚಿತ್ರಿಸಲಾಗಿದೆ.ಪಾತ್ರಗಳಿಗೆ ಏಕಕಾಲಕ್ಕೆ ವ್ಯಕ್ತಿತ್ವ ಹಾಗೂ ಚೈತನ್ಯದ ರೂಪವನ್ನು ನೀಡುವುದು ಆಶಾ ಬಗೆಯವರ ಕಥಾ ಸೃಷ್ಟಿಯ ವೈಶಿಷ್ಟ್ಯ.ಕಾರಂತರ ಕಾದಂಬರಿಗಳಂತೆ ಜೀವನ ಶ್ರದ್ಧೆಯನ್ನು ಬಲಿಷ್ಠಗೊಳಿಸುವ ಹಾಗೂ ಅದರ ಸೌಂದರ್ಯದ ದರ್ಶನವನ್ನು ಮಾಡಿಸುವ ಆಶಾ ಬಗೆಯವರು,ಕಾದಂಬರಿಗಾರ್ತಿಯಾಗಿ ಮರಾಠಿಯ ಕಥಾಪ್ರಪಂಚದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದಾರೆ. ತಮ್ಮ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು ಮರಾಠಿ ಓದುಗರ,ಸಹೃದಯರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
Binding
Soft Bound
Author
Chandrakanth Pokale
Publication Year
2022
Publisher
Ankitha Pusthaka
Number of Pages
326
ISBN-10
9789392230288
Weight
450 GMS
Length
22 CMS
Language
Kannada