Quantity
Product Description
ಕೊನೆ ಹೇಗೋ ಅರಿಯಲಾರೆ!
ಸತ್ವಯುತ ಶೈಲಿಯ ಥ್ರಿಲ್ಲರ್ ಪ್ರಪಂಚದಲ್ಲಿ...
ಕನ್ನಡದ ಪ್ರಮುಖ ಹಿರಿಯ ಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಶ್ರೀ ನಾಗೇಶ್ ಕುಮಾರ್ ತಮ್ಮ ನಿರಂತರ ಪತ್ತೆದಾರಿ ಕಾದಂಬರಿಗಳಿಂದ ಸಾಹಿತ್ಯದಲ್ಲಿ ಕಾಲೂರಿದವರು. ಒಂದಾದ ಮೇಲೊಂದರಂತೆ ಕೃತಿಗಳನ್ನು ರಚಿಸುತ್ತಿರುವ ಶ್ರೀಯುತರ ವಿಶೇಷತೆಯಂದರೆ ವಿಭಿನ್ನ ತಾಂತ್ರಿಕತೆ, ಶ್ರೀಮಂತಿಕೆಯಿಂದ ಕೂಡಿದ ಡ್ರಿಲ್ಲರ್ಗಳು. ಪುಸ್ತಕದಿಂದ ಪುಸ್ತಕಕ್ಕೆ ಹೊಸ ಹೊಸ ಕಥಾ ವಸ್ತುಗಳ ಆಯ್ಕೆ ಮತ್ತು ಪ್ರಸ್ತುತಿಯಿಂದ ಓದುಗರ ಕೃಪೆಗೆ ಪಾತ್ರರಾಗಿರುವ ನಾಗೇಶ್ ಕುಮಾರ್ ಇಂಗ್ಲಿಷ್ ಸಾಹಿತ್ಯದ ಪ್ರಭಾವಕ್ಕೂ ಒಳಗಾದವರು. ಹಾಗಾಗಿ ಆಂಗ್ಲ ಮಾದರಿಯ ತಂತ್ರಗಾರಿಕೆಯ ಛಾಯೆ ಮತ್ತು ವಿಭಿನ್ನ ಶೈಲಿಯ ತಾರ್ಕಿಕ ಅಂತ್ಯಗಳ ಕಾದಂಬರಿಗಳು ಇವರ ವಿಶೇಷತೆ.
ಪ್ರಸ್ತುತ... ಆಯ್ದು ಕೊಂಡಿರುವ ಕಾದಂಬರಿ ಅವರ ಕತೆಗಳಲ್ಲೇ ತೀರ ಹೊಸ ಆಯಾಮದ ಪ್ರಸ್ತುತಿ ಎನ್ನಲಡ್ಡಿಯಿಲ್ಲ. ಹೀಗೆ ಹೊಸ ಹೊಸ ಕಾಲ ಘಟ್ಟದ ಕಥಾನಕಗಳಿಗೆ ತಮ್ಮ ಹೊಸ ಬಗೆಯ ಪುಸ್ತಕಗಳನ್ನು ನೀಡುವ ಬಗ್ಗೆ ಧನಾತ್ಮಕವಾಗಿ ಚಿಂತಿಸುವ ನಾಗೇಶ್ ಸರ್, ಪ್ರಸ್ತುತ ಕನ್ನಡದಲ್ಲಿ ಅಚ್ಚ ಗ್ರಾಂಥಿಕ ಶಬ್ದಗಳ ಬರಹಗಾರರು. ಭಾಷೆಯ ಬಳಕೆಯಲ್ಲಿ ಸಿದ್ಧಹಸ್ತರಾಗಿರುವ ಲೇಖಕರಿಗೆ ಶಬ್ದಗಳ ಸಂಗ್ರಹ ಕೈಹಿಡಿದಿದೆ. ಸರಾಗ ಮತ್ತು ಸುಲಲಿತ ಬರಹದ ಜೊತೆಗೆ ಡ್ರಿಲ್ಲರ್, ವೇಗ, ತಂತ್ರಜ್ಞಾನ, ಆವಿಷ್ಠಾರಗಳ, ವಸ್ತು ನಿಷ್ಠ ನಿರೂಪಣೆಯ ಕಾರಣ ಓದುಗರನ್ನು ಸುಲಭಕ್ಕೆ ತಲುಪಬಲ್ಲರು.
ಇನ್ನಷ್ಟು ಅಭ್ಯಾಸದ ಅಗತ್ಯತೆಯನ್ನು ಬೇಡುವ ಪುಸ್ತಕಗಳು, ಮರು ಓದಿನಲ್ಲಿ ತಿದ್ದುಪಡಿಯಾಗಿ ಹರಿತವಾದ ಶೈಲಿಗೆ ದಕ್ಕಿದರೆ, ಕನ್ನಡ ಸಾಹಿತ್ಯದಲ್ಲಿ ಗೆರೆಗಳಾಗುವ ಕಸುವಿನವು. ಸತ್ವಯುತ ಬರಹಗಳಿಗೆ ಇನ್ನಿಷ್ಟು ಅವರ ಸತ್ವ ಧಾರೆಯೆರೆಯುತ್ತಾ ಕನ್ನಡ ಸಾಹಿತ್ಯಕ್ಕೆ ಅವರ ಸೇವೆ ನಿರಂತರವಾಗಿ ದಕ್ಕಲಿ ಎಂದು ಹಾರೈಸುತ್ತಾ...
Binding
Soft Bound
Number of Pages
194
Publisher
Saahitya Loka Publications
Publication Year
2025
Author
C S Nagesh Kumar
Height
2 CMS
Length
22 CMS
Weight
200 GMS
Width
14 CMS
Language
Kannada