Quantity
Product Description
ಶ್ರೀಧರ ಬಳಗಾರರ ಈ ಕಥಾಸಂಕಲನವನ್ನು ಕುರಿತು ಖ್ಯಾತ ವಿಮರ್ಶಕ ಅಮೂರರು ಹೀಗೆ ಹೇಳಿದ್ದಾರೆ.
ಕನ್ನಡದ ಪ್ರಮುಖ ಕತೆಗಾರರಲ್ಲೊಬ್ಬರಾದ ಶ್ರೀಧರ ಬಳಗಾರರ ಕತೆಗಳು ಎರಡು ಮಹತ್ತರ ಕಾರಣಗಳಿಂದಾಗಿ ತಮ್ಮ ವೈಶಿಷ್ಟ್ಯವನ್ನು ಪಡೆದುಕೊಳ್ಳುತ್ತವೆ. ಮೊದಲನೆಯದಾಗಿ, ಈ ಸಂಗ್ರಹದ 'ತಿಮ್ಮಕ್ಕನ ದರ್ಶನಗಳು', 'ತೊಟ್ಟಿಲು', 'ಕೊನೆಗಾಲ'ಗಳಲ್ಲಿದ್ದಂತೆ,ಇತಿಹಾಸದ ಹೊರಗೆಯೆ ಉಳಿಯುವ ಸಾಮಾನ್ಯ ವ್ಯಕ್ತಿಗಳ ಬದುಕಿನ ರಹಸ್ಯಗಳನ್ನು ಅನ್ವೇಷಿಸುವಲ್ಲಿ ಅವು ತೋರುವ ಏಕಾಗ್ರತೆ ಹಾಗೂ ಕೌಶಲ್ಯ ಎರಡನೆಯದಾಗಿ, ಅವುಗಳ ಐತಿಹಾಸಿಕ ಸಂದರ್ಭ. ಸಾಮಾನ್ಯವಾಗಿ ಬಳಗಾರರ ಎಲ್ಲ ಕತೆಗಳಲ್ಲಿಯೂ ಪಾರಂಪರಿಕ ಬದುಕು ಆಧುನಿಕತೆಯ ಪ್ರವೇಶದಿಂದಾಗಿ ತನ್ನ ಲಯವನ್ನು ಕಳೆದುಕೊಂಡು ಅತಂತ್ರವಾಗುವ ಸನ್ನಿವೇಶವಿರುತ್ತದೆ.
ಬಳಗಾರರ ಕತೆಗಳ ಪ್ರಯೋಗಶೀಲತೆ ಅವರಿಗೆ ಒಂದು ಆಂತರಿಕ ಅವಶ್ಯಕತೆಯಾಗಿ ಬಂದಿದೆಯೇ ಹೊರತು ಹವ್ಯಾಸವೆಂದಲ್ಲ ಎನ್ನುವುದು ಸಮಕಾಲೀನ ಸಂದರ್ಭದಲ್ಲಿ ಮಹತ್ವದ್ದಾಗಿದೆ.
Publisher
Ankitha Pusthaka
Length
0 CMS
Weight
225 GMS
Height
0 CMS
Width
0 CMS
Language
Kannada