Quantity
Product Description
Neeli Hoovu Khali Hrudaya | Jogi
ಬಾಲ್ಯದಲ್ಲಿ ನಾನು ಕಂಡ ಇಬ್ಬರು ಅಪೂರ್ವ ಪ್ರೇಮಿಗಳು ಮತ್ತೆ ಮತ್ತೆ ಕನಸಿನಲ್ಲಿ ಅಂಗಲಾಚುತ್ತಿದ್ದರು. ಬಂದು ನಮ್ಮ ಕತೆ ಬರಿ ಅಂತ ಅವರನ್ನು ನಿರ್ಲಕ್ಷಿಸಿ ಓಡಾಡುತ್ತಿದ್ದೆ. ಇವನೊಬ್ಬ ಉಪಯೋಗಕ್ಕೆ ಬರದ ಜುಜುಬಿ ಕಾದಂಬರಿಕಾರ ಅಂತ ಅವರಿಬ್ಬರೂ ನನ್ನ ಬಗ್ಗೆ ಅಪಪ್ರಚಾರ ಶುರುಮಾಡಿದರು. ಇದು ಯಾಕೋ ಅತಿರೇಕಕ್ಕೆ ಹೋಗುತ್ತಿದೆ ಅನ್ನಿಸಿ ಅವರನ್ನು ಕರೆಸಿಕೊಂಡು, ಮಾತಾಡಿ. ನಿಮ್ಮ ಕತೆ ಬರೆಯುತ್ತೇನೆ ಅಂದೆ.
ಬರೆಯುತ್ತಾ ಹೋದ ಹಾಗೇ ನಾನೊಬ್ಬ ಸೆಕೆಂಡ್ ರೇಟ್ ಕಾದಂಬರಿಕಾರ ಅನ್ನಿಸತೊಡಗಿತು. ತಾರುಣ್ಯದ ತೀವ್ರತೆ. ಹುಮ್ಮಸ್ಸು, ತಕರಾರು, ತಲ್ಲಣಗಳನ್ನು ಮಾತಿನಲ್ಲಿ ಹಿಡಿದಿಡುವ ಕಷ್ಟ ಅರಿವಾಗತೊಡಗಿತು. ಅವರಿಬ್ಬರೂ ನನ್ನ ಮೇಲೆ ಸೇಡು ತೀರಿಸಿಕೊಳ್ಳಲಿಕ್ಕೆಂದೇ ವಿಚಿತ್ರವಾಗಿ ವರ್ತಿಸುತ್ತಿದ್ದರು. ಬೇಕಂತಲೇ ದಾರಿ ತಪ್ಪುತ್ತಿದ್ದರು. ನನ್ನ ಬುದ್ಧಿಮಾತುಗಳನ್ನೂ ಅನುಭವದ ಹಿತನುಡಿಗಳನ್ನೂ ಕೇಳದೇ, ತಮಗಿಷ್ಟ ಬಂದ ಹಾಗೆ ಬದುಕುತ್ತಿದ್ದರು.
ಕೊನೆಗೂ ಪಟ್ಟು ಬಿಡದೇ ನಾನು ಅವರನ್ನೊಂದು ದಾರಿಗೆ ತಂದೆ ಅನ್ನುವಷ್ಟರಲ್ಲಿ ಅನಾಹುತವೊಂದು ನಡೆದುಹೋಯಿತು. ಜೀವನದಲ್ಲಿ ಏನು ನಡೆಯಬೇಕು ಅನ್ನುವುದನ್ನು ಜೀವನವೇ ನಿರ್ಧರಿಸುತ್ತದೆ ಅಂತ ಗೊತ್ತಾಯಿತು.
ಈ ಕಾದಂಬರಿ ಓದಿದ ನಿಮಗೂ ನಾನೊಬ್ಬ ಎರಡನೇ ದರ್ಜೆಯ ಕಾದಂಬರಿಕಾರ ಅನ್ನಿಸಬಹುದು. ಹಾಗೇನಾದರೂ ಅನ್ನಿಸಿದರೆ ನಾನು ಸರಿಯಾಗಿಯೇ ಬರೆದಿದ್ದೇನೆ ಅಂತ ಸಮಾಧಾನವಾಗುತ್ತದೆ.
Author
Jogi
Binding
Soft Bound
ISBN-13
9789348262257
Number of Pages
176
Publication Year
2025
Publisher
Ankitha Pusthaka
Height
2 CMS
Length
22 CMS
Weight
200 GMS
Width
14 CMS
Language
Kannada