Quantity
Product Description
ಯುವ ಉತ್ಸಾಹಿ ಅನಂತ ಕುಣಿಗಲ್ ನನಗೆ ಇತ್ತೀಚಿನ ಪರಿಚಯ. ಆದರೆ ಭೇಟಿಯಾದ ದಿನವೇ ಒಂದು ರೀತಿಯ ಆತ್ಮೀಯತೆ ಬೆಳೆಯಿತು ಎಂದರೆ ಈತ ಎಂತಹ ಸ್ನೇಹಜೀವಿಯೆಂದು ತಿಳಿಯುತ್ತದೆ.
ನಾಟಕ, ಸಿನಿಮಾ, ಕಥೆ, ಕವನ, ಕಾದಂಬರಿ - ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ. ಯಾವಾಗಲೂ ಏನಾದರೊಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿರುತ್ತಾರೆ. ದೃಶ್ಯಮಾಧ್ಯಮದಲ್ಲಿ ಕೆಲಸ ಮಾಡುವುದರಿಂದಲೋ ಏನೋ, ಇವರ ಕಥೆಗಳು ಕಣ್ಣಿಗೆ ಕಟ್ಟಿದಂತೆ ನಮ್ಮೆದುರು ನಿಲ್ಲುತ್ತವೆ. ಆ ಹಿನ್ನೆಲೆಯಲ್ಲೇ ಇಲ್ಲಿನ ಎಲ್ಲ ಕಥೆಗಳ ಪ್ರತೀ ಪಾತ್ರ ಹಾಗೂ ಸನ್ನಿವೇಶಗಳು ಮಾತನಾಡುತ್ತವೆ.
ಒಂದು ಹೋರಾಟದ ಕಥೆಯ ಇಳಿವಯಸ್ಸಿನ ಸಾಕವ್ವನ ಭಂಡತನ, ಬಯಲ ತೊರೆದ ಹಾಡಿನ ಕಂಠಿಯ ದುರಂತ, #ಟ್ಯಾಗ್ ಕಥೆಯಲ್ಲಿನ ಸಾಮಾಜಿಕ ಜಾಲತಾಣದ ಯಡವಟ್ಟುಗಳು, ಭಗ್ನ ಕನಸುಗಳ ದೇಹ ದೇಗುಲ, ಮೇಟ್ಟುಳಿಯನ್ನು ಹುಡುಕಿ ಹೊರಟವನ ತಾಪತ್ರಯಗಳು, ಸರದಿಯ ತಮ್ಮಣ್ಣನ ಕೊನೆ ದಿನಗಳು, ಬೆಂಗಳೂರಿಗೆ ಬಂದ ಬೋರೇಗೌಡನ ಬದುಕಿನ ಅನಿರೀಕ್ಷಿತ ತಿರುವುಗಳು, ಅನಂತನ ಪ್ರೀತಿಯ ಯಾಶಿಗೊಂದು ಕ್ಷಮಾಪತ್ರ, ಕಾಡುವ ವಿಸರ್ಜನೆ, ಕೆಂಪು ಬಸ್ಸಿನ ನೀಲಿ ಸೀಟು ಪ್ರಸಂಗ ಸೇರಿದಂತೆ ಇನ್ನಿತರ ಆಸಕ್ತಿಕರ ಪುಟ್ಗತೆಗಳು ಇಲ್ಲಿವೆ.
ಎಲ್ಲವೂ ವೈವಿಧ್ಯಮಯ ವಸ್ತುಗಳಿಂದ ಕೂಡಿದ ಕಥೆಗಳಾಗಿದ್ದು, ಸರಾಗವಾಗಿ ಓದಿಸಿಕೊಳ್ಳುತ್ತವೆ. ಸಮಾಜದ ಬಗ್ಗೆ ಲೇಖಕರಿಗಿರುವ ಕಾಳಜಿ ಪುಸ್ತಕದ ಶೀರ್ಷಿಕೆಯಿಂದ ಹಿಡಿದು ಎಲ್ಲ ಕಥೆಗಳಲ್ಲೂ ಎದ್ದು ಕಾಣುತ್ತದೆ.
Author
Anantha Kunigal
Binding
Soft Bound
Number of Pages
132
Publication Year
2020
Publisher
Avva Pustakalaya
Height
2 CMS
Length
22 CMS
Weight
200 GMS
Width
14 CMS
Language
Kannada