Product Description
ಆಲೆಮನೆಯಿಂದ ಬಂದ ಹೊಸಬೆಲ್ಲವನ್ನು ತಿನ್ನಲು ಬಂದ ಕಬ್ಬೆಕ್ಕು ಏನಾಯಿತು? ಮರವೇರಿ ಗಪ್ಪೆಂದು ಕೂತಿದ್ದ ದೈತ್ಯ ಉಡ ಕೆಳಗಿಳಿಯಿತೆ? ಕೇಸರಿ ಬಣ್ನದ ಮೋಹಕ ಕೆಂದಳಿಲಿನ ಮರಿ ರಸ್ತೆ ಬದಿಯಲ್ಲಿ ಬಿದ್ದಿದ್ದು ಹೇಗೆ? ಗೋಣೀಚೀಲದಲ್ಲಿ ಸುತ್ತಿ ತಂದಿದ್ದ ನವಿಲಿಗೆ ಯಾವ ಗತಿ ಬಂತು? ಕೇಳಬೇಡಿ... ಮಲೆನಾಡಿನ ಮೋಹಕ ಜೀವಲೋಕವೇ ಹಿಂದಿರುಗಲಾಗದ ಲೋಕಕ್ಕೆ ಒಂದೊಂದಾಗಿ, ಹಿಂಡುಹಿಂಡಾಗಿ ಸಾಗುತ್ತಿದೆ. ಕಣ್ಣರೆ ಕಂಡ ಇಂಥ ದುರಂತ ಕತೆಗಳನ್ನು ಇಲ್ಲಿ ಪೋಣಿಸಿಕೊಟ್ಟ ಅಖಿಲೇಶ್ ಚಿಪ್ಪಳ್ಳಿಯವರ ಮೊದಲ ಕೃತಿ ಇದು. ಸಾಗರ-ಜೋಗದ ಆಸುಪಾಸಿನಲ್ಲಿ ಅಳಿವಿನಂಚಿಗೆ ಬಂದ ಜೀವಿಗಳನ್ನು ರಕ್ಷಿಸಲೆಂದು ‘ಸ್ವಾನ್ ಅಂಡ್ ಮ್ಯಾನ್’ ಹೆಸರಿನ ಪುಟ್ಟ ಸಂಸ್ಥೆಯನ್ನು ಇವರು ನಡೆಸುತ್ತಿದ್ದಾರೆ. ವೃತ್ತಿಯಲ್ಲಿ ಫಿಸಿಯೊ ಥೆರಪಿಸ್ಟ್ ಆಗಿದ್ದು, ಜಲವಾಸಿ, ನೆಲವಾಸಿಗಳ ಸಂಕಟಕ್ಕೂ ಸ್ಪಂದಿಸುವ ಅವರು ಪ್ರಕೃತಿಯ ನೋವಿಗೆ ಅರೆದ ಅಕ್ಷರಮದ್ದು ಇಲ್ಲಿದೆ.