Product Description
೧೯೫೭ರಲ್ಲಿ 'ಮುಂಗಾರ ಮುಗಿಲು' ಎಂಬ ಒಂದು
ಚಿಕ್ಕ ಕತೆಯ ಮೂಲಕ ಸಾಹಿತ್ಯ ಕ್ಷೇತ್ರವನ್ನು
ಪ್ರವೇಶಿಸಿದ ಕೆ. ಟಿ. ಗಟ್ಟಿ ಸೃಜನಶೀಲತೆ ಮತ್ತು
ವೈಚಾರಿಕತೆ ಒಂದು ಇನ್ನೊಂದರ ಪ್ರತಿಸ್ಪರ್ಧಿ ಅಲ್ಲ,
ಒಂದರ ಬೇರು ಇನ್ನೊಂದರಲ್ಲಿ ಎನ್ನುವ ಸಾಹಿತ್ಯ
ಧೋರಣೆಯನ್ನು ತನ್ನ ಮೊದಲ ಕಾದಂಬರಿ
'ಶಬ್ದಗಳು'(೧೯೭೩)ವಿನಿಂದ ಇತ್ತೀಚೆಗಿನ ಅವರ
೪೫ನೇ ಕಾದಂಬರಿ 'ನಿನ್ನೆ ಇಂದು ನಾಳೆ'(೨೦೦೮)ಯ
ವರೆಗೆ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕಾದಂಬರಿ
ಬರವಣಿಗೆಯಲ್ಲದೆ, ಸಣ್ಣ ಕತೆ, ಕಾವ್ಯ, ಪ್ರಬಂಧ,
ನಾಟಕ, ಬಾನುಲಿ ನಾಟಕ, ಪ್ರವಾಸ ಕಥನ, ಮಕ್ಕಳ
ಸಾಹಿತ್ಯ, ಅನುವಾದ, ಭಾಷಾ ಶಾಸ್ತ್ರ, ಶಿಕ್ಷಣ
ಮುಂತಾದ ವಿವಿಧ ಪ್ರಕಾರಗಳಲ್ಲಿ ಕನ್ನಡದಲ್ಲಿ,
ಇಂಗ್ಲಿಷಿನಲ್ಲಿ ಮತ್ತು ತುಳುಭಾಷೆಯಲ್ಲಿ ಗಟ್ಟಿಯವರ
ತೊಂಬತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಆತ್ಮ
ಕಥೆ 'ತೀರ' ಪ್ರಕಟವಾಗಿದೆ.