Quantity
Product Description
ಒಂದೊಂದು ಕಥೆಯ ಲೋಕವು ಬೇರೆ. ಅವುಗಳ ಜೀವನ ದೃಷ್ಟಿ, ದಾಟು, ಧಾವಂತಗಳ ಬಗೆಗಳೂ ಭಿನ್ನ. ಈ ಭಿನ್ನತೆಯೇ ವರ್ತಮಾನದ ಬದುಕಿನ ಮುಖ್ಯ ವಸ್ತು. ಅದರ ಅನನ್ಯತೆಯನ್ನು ಸಾಬೀತುಗೊಳಿಸುವಂತೆ ಕಥೆಗಾರರು ಇಲ್ಲಿನ ಕಥೆಗಳನ್ನು ಹೆಣೆದಿದ್ದಾರೆ. ಇದು 'ಒಂದು ಸೃಜನಶೀಲ ಕ್ರಿಯೆ'ಯಾಗಿ ಸೀಮಿತವಾಗದೇ, ಬದುಕಿನ ಸ್ಥಿತ್ಯಂತರಗಳ ಜೊತೆಗೆ ಮುಖಾಮುಖಿಯಾಗಿಸುವ ಒಂದು ಪ್ರಕ್ರಿಯೆಯಾಗಿ ರೂಪುಗೊಂಡಿದೆ.
'ಗಾಂಧಿಯ ಪ್ರೇಯಸಿ' ಅಂತಹ ಕಥೆ, ನಮ್ಮ ನಡುವೆಯೇ ನಡೆದಿರಬಹುದೇನೋ ಎನ್ನುವಷ್ಟು ನೈಜತೆ, ಭಾವನಾತ್ಮಕತೆಯನ್ನು ಇಲ್ಲಿನ ಕಥೆಗಳು ತುಂಬಿಕೊಂಡು ಓದಿನ ನಡುವೆ ನಮ್ಮನ್ನು ಅವುಗಳ ಕಥಾಲೋಕಕ್ಕೆ ಎಳೆದೊಯ್ಯುತ್ತವೆ. ಇಲ್ಲಿನ ಕಥೆಗಳ ಶಕ್ತಿಯು ವಿಷಯ, ನಿರೂಪಣೆ, ಪಾತ್ರ ಎಲ್ಲವುಗಳಲ್ಲಿ ಹಂಚಿಹೋಗಿದೆ. ಒಂದನ್ನು ಮೆಚ್ಚಿ ಮತ್ತೊಂದನ್ನು ಬದಿಗಿರಿಸುವ ಪ್ರಶ್ನೆಯೇ ಇಲ್ಲ. ಸಮಕಾಲೀನ ಮಲೆಯಾಳಂ ಕಥೆಗಾರರ ಶಕ್ತಿ ಸಂಚಯವಾಗಿ ಈ ಕಥಾ ಸಂಪುಟವು ಕಾಣುತ್ತಿದೆ.
ಸುನೈಫ್ ಅವರ ಸರಳ, ಸುಲಭವಾದ ಅನುವಾದದಲ್ಲಿ ಸೃಜನಶೀಲ ಕೃತಿಯನ್ನು ಸ್ಥಳೀಯತೆಗೆ ಒಗ್ಗಿಸುವ ಜಾಣ್ಮ ಮತ್ತು ಸೂಕ್ಷ್ಮತೆಗಳು ಓದಿನಿಂದಾಚೆಗೆ ಹೋಗದಂತೆ ನಮ್ಮನ್ನ ಹಿಡಿದಿಡುತ್ತವೆ.
Author
Sunaif
Binding
Soft Bound
Number of Pages
288
Publication Year
2025
Publisher
Sankathana
Height
3 CMS
Length
22 CMS
Weight
500 GMS
Width
14 CMS
Language
Kannada