Select Size
Quantity
Product Description
ಇಕ್ಕಟ್ಟಿನಲ್ಲಿ ಬದುಕಿದರೂ, ನೆಮ್ಮದಿಯಿಂದ ದಿನ ಕಳೆಯುವವರಲ್ಲಿ ಮಿಡಲ್ ಕ್ಲಾಸ್ ಫ್ಯಾಮಿಲಿಯರದ್ದೇ ಎತ್ತಿದ ಕೈ. ಬೆರಳೆಣಿಕೆಯಷ್ಟೇ ಜನ, ಎಲ್ಲರಿಗೂ ಒಂದೇ ಟಿ.ವಿ. ಒಂದೇ ಬಾತ್ರೂಮ್. ಹಾಗೂ ಒಂದೇ ಕಿಚನ್. ಇವರು ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ, ಗೌರವ -ಮರ್ಯಾದೆಗಳಿಗಾಗಿಯೇ ಉಸಿರಾಡುತ್ತಾರೆ. ದೊಡ್ಡ ದೊಡ್ಡ ಕನಸುಗಳು ಈಡೇರದಿದ್ದರೂ ಚಿಕ್ಕ ಪುಟ್ಟ ಆಸೆಗಳಲ್ಲಿಯೇ ತೃಪ್ತಿಪಡುತ್ತಾರೆ.
"ಹಾಸಿಗೆ ಇದ್ದಷ್ಟು ಕಾಲು ಚಾಚು. ಆಸೆಯೇ ದುಃಖಕ್ಕೆ ಮೂಲ. ಅತಿ ಆಸೆ ಗತಿ ಕೇಡು. ನಿಧಾನವೇ ಪ್ರದಾನ" ಇವುಗಳು ಗಾದೆಗಳಾಗಿರದೆ. ಮಿಡಲ್ ಕ್ಲಾಸ್ ಫ್ಯಾಮಿಲಿಯ ಧೈಯೋದ್ದೇಶಗಳಾಗಿರಬೇಕಾಗಿತ್ತು. ಯಾಕೆಂದರೆ ಅವುಗಳಂತೆ ನಡೆಯುವವರು ಇವರು ಮಾತ್ರವೇ.. ಸಣ್ಣ ಸೂಜಿಯಿಂದ ಸಾವಿನವರೆಗೂ ಅಚ್ಚುಕಟ್ಟಿನ ಬದುಕಿಗಾಗಿ ಹೋರಾಡುವ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಅನಂತ ಅವರು ಈ ಸಂಕಲನದಲ್ಲಿ ಪರಿಚಯಿಸಿದ್ದಾರೆ. ಆ ಎಲ್ಲಾ ಪಾತ್ರಗಳು ತಮ್ಮ ಸುತ್ತ ತಾವೇ ಸುತ್ತಿಕೊಂಡು ಮತ್ತೇನನ್ನೋ ಹೊಳೆಸುವ ರೀತಿಯಲ್ಲಿ ಕಂಡುಬಂದಿವೆ. ಸುಖ-ದುಃಖ, ನೋವು-ನಲಿವು, ಆಸೆ-ಆಯಾಸಗಳನ್ನು ಸಮಾನವಾಗಿ ಸ್ವೀಕರಿಸುವ ಎಲ್ಲರಿಗೂ ಈ ಕಥೆಗಳು ಊಟದೆಲೆಯ ಮೇಲಿನ ಪಾಯಸ ಹಾಗೂ ಲಡ್ಡುವಿನಂತೆ ರುಚಿಸುತ್ತವೆ.
ನಮ್ಮ ಪ್ರಕಾಶನದ ಪ್ರಕಟಣೆಯ ಮೊದಲ ಕೃತಿಯಾಗಿ. ಅನಂತ ಅವರ "ಋಣಭಾರ" ಕಥಾಸಂಕಲನ ನಮಗೆ ಖುಷಿ ತಂದಿದೆ.
Binding
Soft Bound
Author
Anantha Kunigal
Number of Pages
110
Publisher
Avva Pustakalaya
Publication Year
2020
Height
1 CMS
Length
22 CMS
Weight
100 GMS
Width
14 CMS
Language
Kannada