Select Size
Quantity
Product Description
ಮೀನಾ ಕಾಕೊಡಕಾರರ ಕಥೆಗಳು ಬಾಹ್ಯ ನೋಟಕ್ಕೆ ಬಹಳ ಸರಳವೆಂದು ಗೋಚರಿಸಿದರೂ, ಬದುಕಿನ ಕಟು ವಾಸ್ತವದ ಚಿತ್ರಣದ ಮೂಲಕ ಓದುಗರ ಮನಸ್ಸಿಗೆ, ಹೃದಯಕ್ಕೆ ತಟ್ಟುವ ರೀತಿಯದ್ದಾಗಿವೆ. ವೈಚಾರಿಕತೆಯ ಭಾರವಿಲ್ಲದೆ, ಶೈಲಿ, ತಂತ್ರಗಳ ಗೋಜಿಗೆ ಹೋಗದೆ ಹೇಳಬೇಕಾಗಿರುವುದನ್ನು ನೇರವಾಗಿ ಹೇಳುವ ಈ ಕಥಾನಕವು ಆಪ್ತ ಅನುಭವವನ್ನು ನೀಡುತ್ತದೆ. ಈ ಸಂಕಲನದ ಬಹುಪಾಲು ಕಥೆಗಳು ಗ್ರಾಮೀಣ ಹಿನ್ನೆಲೆಯನ್ನು ಹೊಂದಿದ್ದು, ಸ್ತ್ರೀಪಾತ್ರ ಕೇಂದ್ರಿತವಾಗಿವೆ. ಹಳ್ಳಿ ಪ್ರದೇಶದ ಬಡ ಹೆಣ್ಣುಮಕ್ಕಳ ಮುಗ್ಧತೆ, ಅವರಲ್ಲಿ ಸುಪ್ತವಾಗಿರುವ ತಾಯ್ತನದ ಬಯಕೆ, ಹೆತ್ತ ಮಕ್ಕಳನ್ನು ಪೋಷಿಸಿ ಬೆಳೆಸಲು ಅವರು ಎದುರಿಸುವ ಸಮಸ್ಯೆಗಳು, ಇವೆಲ್ಲವನ್ನೂ ನೈಜಭಾವದಿಂದ ಇಲ್ಲಿ ಚಿತ್ರಿಸಲಾಗಿದೆ. ಎರಡು ಹೊತ್ತಿನ ಗಂಜಿಯನ್ನು ಸಂಪಾದಿಸಲು ಕಷ್ಟಪಡುವ ಕುಟುಂಬಗಳ ದಿನನಿತ್ಯದ ಹೋರಾಟದ ಮುಂದೆ ಆದರ್ಶದ ಬೋಧನೆ ಹುಸಿಯಾಗುವುದನ್ನು, ವ್ಯಕ್ತಿಯ ಅನೈತಿಕತೆ, ಸಂದೇಹ ಪ್ರವೃತ್ತಿ ಮತ್ತು ಲಾಲಸೆಯ ಎದುರು ಕಟ್ಟಿಕೊಂಡ ಬದುಕು ಕುಸಿಯುವುದನ್ನು ಲೇಖಕಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಈ ಕಥೆಗಳಲ್ಲಿ ಗೋವೆಯ ಸಮುದ್ರತೀರದ ಸುಂದರ ಪ್ರಕೃತಿ, ಅಲ್ಲಿಯ ಗ್ರಾಮೀಣ ಸಂಸ್ಕೃತಿ, ಕೃಷಿಕರ ಬದುಕು ಮತ್ತು ವಲಸಿಗ ಕಾರ್ಮಿಕ ವರ್ಗದ ಅಸ್ಥಿರತೆ ಅನಾವರಣಗೊಂಡಿದೆ.
Author
Dr Geetha Shenoy
Binding
Soft Bound
Number of Pages
100
Publication Year
2016
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada